ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಧ್ಯಯನ ತಂಡ ಭೇಟಿ

Rashmi Kasaragodu
Updated On : 12 Nov 2013, 11:59 am

ದೇವದುರ್ಗ:  ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಅವುಗಳ ಬಳಕೆಗೆ ಸಂಬಂಧಿಸಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಕೆ ಹಿನ್ನೆಲೆ ಅಧ್ಯಯನಕ್ಕಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿರುವ ಗ್ರಾಮಗಳಿಗೆ ಧಾರವಾಡ ವಿವಿಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರ ತಂಡವೊಂದು ಆಗಮಿಸಿದೆ.ಪ್ರೊ. ಎಸ್.ಬಾಗಲಕೋಟ್ ಅವರ ನೇತೃತ್ವದಲ್ಲಿ 8 ಜನ ಅಧ್ಯಯನಕಾರರ ತಂಡವು ತಾಲೂಕಿನ ನಾಗಡದಿನ್ನಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಕಡಿಮೆ ಮತ್ತು ಅತೀ ಕಡಿಮೆ ತೂಕದಿಂದ ಬಳಲುತ್ತಿರುವ ಮಕ್ಕಳ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದರು. ಮಾಹಿತಿಯನ್ನು ಜಿಲ್ಲಾ ಮಾನವ ಅಭಿವೃದ್ಧಿ ವರದಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಗ್ರಾಮದಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿ ಜಿಲ್ಲಾಡಳಿತಕ್ಕೆ ಸಲಹೆ ನೀಡಲಾಗುತ್ತದೆ ಎಂದು ಪ್ರೊ. ಎಸ್. ಬಾಗಲಕೋಟ್ ತಿಳಿಸಿದರು.  ಗ್ರಾ.ಪಂ. ಅಧ್ಯಕ್ಷೆ ಬೂದೆಮ್ಮ ಹೆಗ್ಗಡದಿನ್ನಿ, ಗ್ರಾಪಂ ಪಿಡಿಒ ವಿಜಯಕುಮಾರ, ಅಂಗನವಾಡಿ ಕಾರ್ಯಕರ್ತೆಯರಾದ ದುರುಗಮ್ಮ ನಾಯಕ, ನಿರ್ಮಲಾ, ಅನುಷಾ ಪಾಟೀಲ್, ಸಾಕ್ಷರತಾ ಪ್ರೇರಕ ಕೆ. ಬಂದೇನವಾಜ್ ನಾಗಡದಿನ್ನಿ  ಇದ್ದರು.
ಅಧಿಕಾರ ಸ್ವೀಕಾರಕ್ಕೆ ತಡೆ; ಎಚ್ಚರಿಕೆ
ದೇವದುರ್ಗ: ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿ ಹುದ್ದೆಗೆ ಪ್ರಭಾರಿಯಾಗಿ ಸೇವೆ ಸಲ್ಲಿಸಲು ಆಗಮಿಸಿದ್ದ ಅಧಿಕಾರಿಯನ್ನು ಪ್ರಭಾವಿ ಕೈಗಳು ಹಾಜರಾಗದಂತೆ ತಡೆದಿವೆ. ವಾರದೊಳಗೆ ಮುಖ್ಯಾಧಿಕಾರಿ ಹುದ್ದೆಗೆ ಅಧಿಕಾರಿಯನ್ನು ನೇಮಿಸದಿದ್ದರೆ ಬಿಜೆಪಿ ಸದಸ್ಯರು ಹೋರಾಟಕ್ಕಿಳಿಯಲಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಫಕ್ರೊದ್ದೀನ್ ಗೌರಂಪೇಟ್ ಹಾಗೂ ಉಪಾಧ್ಯಕ್ಷ ನಾಗಪ್ಪ ಉಪ್ಪಾರ ಎಚ್ಚರಿಸಿದ್ದಾರೆ. ಮುಖ್ಯಾಧಿಕಾರಿ ಹುದ್ದೆಗೆ ಫಿರೋಜ್ ಖಾನ್ ಎಂಬುವವರು ಅಧಿಕಾರ ಸ್ವೀಕರಿಸಲು ಆಗಮಿಸಿದ್ದರು. ಆದರೆ ಏಕಾಏಕಿ ಅಧಿಕಾರ ಸ್ವೀಕರಿಸದೇ ಮರಳಿದ್ದಾರೆ. ಕಾಣದ ಕೈಗಳು ಅವರನ್ನು ತಡೆದಿವೆ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ವಾರದೊಳಗೆ ಮುಖ್ಯಾಧಿಕಾರಿ ಹುದ್ದೆಗೆ ಮುಖ್ಯಾಧಿಕಾರಿಯನ್ನು ನೇಮಿಸದಿದ್ದರೆ, ತಹಸೀಲ್ದಾರ್ ಕಚೇರಿ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement