ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅರಣ್ಯ ಪ್ರದೇಶ ಅಧಿಕಾರಿಗಳಿಂದ ಕಾಟಾಚಾರದ ಸಮೀಕ್ಷೆ

Rashmi Kasaragodu
Updated On : 12 Nov 2013, 12:01 pm

ಚಿಂಚೋಳಿ: ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ಎಂದು ಕುಖ್ಯಾತಿಗೆ ಒಳಪಟ್ಟಿದರೂ ಹೈ-ಕ ಪ್ರದೇಶದಲ್ಲಿ ಏಕೈಕ ನೈಸರ್ಗಿಕವಾಗಿ ಬೆಳೆದಿರುವ ಕುಂಚಾವರಂ ಅರಣ್ಯಪ್ರದೇಶ ಮತ್ತು ಕೆಲವು ಐತಿಹಾಸಿಕ ಪ್ರವಾಸಿತಾಣಗಳು ಒಳಗೊಂಡಿರುವ ಪ್ರಮುಖ ಸ್ಥಳಗಳ ಸಮೀಕ್ಷೆ ರಾಜ್ಯ ಪ್ರವಾಸೋದ್ಯಮ ನಡೆಸುತ್ತಿದ್ದು, ಅಧಿಕಾರಿಗಳು ಕೆಲವು ಸ್ಥಳಗಳಿಗೆ ಭೇಟಿ ನೀಡಿ ಕಾಟಾಚಾರಕ್ಕೆ ಸಮೀಕ್ಷೆ ನಡೆಸಿದ್ದಾರೆಂದು ತಿಳಿದು ಬಂದಿದೆ.
  ತಾಲೂಕಿಗೆ ರಾಜ್ಯಪ್ರವಾಸೋದ್ಯಮ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಚಂದ್ರಂಪಳ್ಳಿ, ಗೊಟ್ಟಂಗೊಟ್ಟ ಮತ್ತು ಎತ್ತಪೋತ ಸ್ಥಳಗಳ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಉಪ ವಲಯ ಅರಣ್ಯಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶದ ವನ್ಯಜೀವಿ ಧಾಮ ಮೀಸಲು ಅರಣ್ಯ ಪ್ರದೇಶದಲ್ಲಿ ಬರುವ ಮಂಡಿ ಬಸವಣ್ಣ, ಲಾಲ್ ತಲಾಬ್, ಹಾಥಿ ಪಗಡಿ, ಬಡೇಸಾಬ್ ದರ್ಗಾ ಅನೇಕ ಪ್ರವಾಸಿ ಸ್ಥಳಗಳ ಒಳಗೊಂಡಿವೆ. ಆದರೆ ರಾಜ್ಯ ಪ್ರವಾಸೋದ್ಯಮ ಅಧಿಕಾರಿಗಳು ಕೆಲವು ಸ್ಥಳಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ತಾಲೂಕಿನ ಅತ್ಯಂತ ರಮಣೀಯ ಸೌಂದರ್ಯ ಸೊಬಗನ್ನು ಹಚ್ಚ ಹಸಿರಿನಿಂದ ಕಂಗೊಳಿಸುವ ಅರಣ್ಯಪ್ರದೇಶದ ಗೊಟ್ಟಂಗೊಟ್ಟ ಮೀಸಲು ಪ್ರದೇಶದಲ್ಲಿರುವ ಭೀಮ- ದುರ್ಯೋಧನ ಕಾಳಗ ಸ್ಥಳ ಮತ್ತು ಬಕ್ಕಪ್ರಭು ಪಾದುಕೆಗಳ ಸ್ಥಳ ಹಾಗೂ ಮಿರಿಯಾಣ, ಮೋಘಾ ರಾಮಲಿಂಗೇಶ್ವರ ದೇವಾಲಯ, ರುಮ್ಮನಗೂಡ ಶಿಲೆಗಳು, ದೇಗಲಮಡಿ ಮುಂತಾದ ಪ್ರದೇಶಗಳನ್ನು ಕಡೆಗಣಿಸಲಾಗಿದೆ ಎನ್ನಲಾಗಿದೆ. ಸ್ಥಳೀಯ ಶಾಸಕರು ತಾಲೂಕಿನ ಪ್ರಮುಖ ಸ್ಥಳಗಳನ್ನು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದು, ಅಧಿಕಾರಿಗಳು ಮಾತ್ರ ಕಾಟಾಚಾರಕ್ಕೆ ಸಮೀಕ್ಷೆ ನಡೆಸಿರುವುದು ಅಚ್ಚರಿ ಸಂಗತಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement