ಐಐಟಿ ಪ್ರವೇಶಕ್ಕೆ ತಪಸ್ ನೆರವು
ಗುಲ್ಬರ್ಗ: ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಪಸ್ ರಾಷ್ಟೋತ್ಥಾನ ಪರಿಷತ್ ಮತ್ತು ಬೇಸ್ ಜಂಟಿಯಾಗಿ ಉನ್ನತ ಮಟ್ಟದ ವೃತ್ತಿಪರ ಶಿಕ್ಷಣಕ್ಕೆ (ಐಐಟಿ) ವಿಶೇಷ ತರಬೇತಿ-ಶಿಕ್ಷಣ ಒದಗಿಸುವ ಕಾರ್ಯಕ್ರಮ ಆಯೋಜಿಸಿದೆ. ಆರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಿಹಾರದ ಸೂಪರ್-30 ಯಶಸ್ವಿನ ಮಾದರಿಯಲ್ಲಿ, ನಮ್ಮ ರಾಜ್ಯದಲ್ಲೂ ಅಂತಹದ್ದೇ ಮಹತ್ವಾಕಾಂಕ್ಷೆಯ ಬಡ ಮಕ್ಕಳ ಪಾಲಿನ ಭಾಗದ ಯೋಜನೆ ತಪಸ್ ಸದ್ದುಗದ್ದಲವಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ತಪಸ್-ರಾಷ್ಟ್ರೋತ್ಥಾನ ಪರಿಷತ್ ಮತ್ತು ಬೇಸ್ ಜಂಟಿಯಾಗಿ ಇದನ್ನು ಕಾರ್ಯಗತಗೊಳಿಸುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದರೂ ಬುದ್ಧಿವಂತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಬಹಳಷ್ಟು ಇದ್ದಾರೆ. ಉತ್ತಮ ಅವಕಾಶಗಳ ಮಾಹಿತಿಗಳ ಕೊರತೆ ಹಾಗೂ ಆರ್ಥಿಕ ಸಮಸ್ಯೆಗಳಿಂದಾಗಿ ತಮ್ಮ ಸಾಮರ್ಥ್ಯದ ಸದುಪಯೋಗ ಪಡೆಯದೇ ಅವಕಾಶ ವಂಚಿತರಾಗುತ್ತಿದ್ದಾರೆ.ಇಂತಹ ಮಕ್ಕಳಿಗೆ ಬೆಂಬಲ ನೀಡಿದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಅರಿತು ಯಶಸ್ಸಿನ ಮೆಟ್ಟಿಲೇರುವುದರ ಜೊತೆಗೆ ಸಮಾಜದ ಪರಿವರ್ತನೆಗೆ ತಮ್ಮ ಪುಟ್ಟ ಕಾಣೆಕೆಯನ್ನು ಕೊಡಬಲ್ಲವರಾಗುತ್ತಾರೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ಬೇಸ್ ಸಹಯೋಗದೊಂದಿಗೆ ತಪಸ್ ಪ್ರಕಲ್ಪವನ್ನು ಪ್ರಾರಂಭಿಸಿದೆ.
ಪ್ರಸಕ್ತ ಸಾಲಿನಲ್ಲಿ ಹತ್ತನೇ ತರಗತಿಯನ್ನು ಪೂರೈಸುವ ಸುಮಾರು 30 ರಿಂದ 40 ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಾಜ್ಯಾದ್ಯಂತ ಆರಿಸಲಾಗುವುದು. ಎರಡು ವರ್ಷಗಳ ಪಿಯುಸಿ ಶಿಕ್ಷಣವನ್ನು ಉಚಿತವಾಗಿ ನೀಡಿ ಅವರನ್ನು ಐಐಟಿ ಪ್ರವೇಶ ಪರೀಕ್ಷೆಗೆ ಅಣಿಗೊಳಿಸಲಾಗುವುದು.ಆಯ್ಕೆ ವಿಧಾನ: ಅರ್ಜಿ ಸಲ್ಲಿಸಲು ನ. 15 ಕೊನೆಯ ದಿನವಾಗಿದೆ. ಲಿಖಿತ ಪರೀಕ್ಷೆ ಡಿ. 25 ರಂದು ಕರ್ನಾಟಕದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಪಟ್ಟಿ ಹಾಗೂ ಅರ್ಜಿ ನಮೂನೆಗಾಗಿ ಈ ಜಾಲತಾಣವನ್ನು ಸಂಪರ್ಕಿಸಿರಿ. ಢಿಢಿಢಿ.ಡಿಛಠಛಡಜಜ್ಡ.್ಟ್ಠ್ಜ
ನಲ್ಲಿ ನೀಡಲಾಗುವುದು. ಮಾಹಿತಿಗಾಗಿ ವಿಕಾಸ ಅಕಾಡೆಮಿ ಕಂಪು ಕಾರ್ಯಾಲಯ ಐವಾನ್ ಇ ಶಾಹಿ ಅತಿಥಿ ಗೃಹದ ಮುಂಭಾಗ ಗುಲ್ಬರ್ಗ. ದೂ 08472-273810. ಸಂಯೋಜಕರು, ಬಸವಾಜ ಘಣೂರೆ 9448320142ಗೆ ಸಂಪರ್ಕಿಸಿ.