ನಾಳೆ ಕೆಜೆಪಿ ರ್ಯಾಲಿ
ಮಸ್ಕಿ: ಶಾದಿ ಭಾಗ್ಯ ಯೋಜನೆಯನ್ನು ಎಲ್ಲ ಬಡವರಿಗೆ ವಿಸ್ತರಿಸುವಂತೆ ಒತ್ತಾಯಿಸಿರುವ ಕೆಜೆಪಿ ಮಸ್ಕಿ ಘಟಕವು, ನ.13 ರಂದು ಪ್ರತಿಭಟನಾ ರ್ಯಾಲಿ ಆಯೋಜಿಸಿದೆ.
ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಶಾದಿಭಾಗ್ಯ ಯೋಜನೆಯನ್ನು ಎಲ್ಲ ಬಡ ವರ್ಗದವರಿಗೂ ವಿಸ್ತರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಇಲ್ಲಿನ ಕೆಜಿಪಿ ಘಟಕ ಬೆಂಬಲ ವ್ಯಕ್ತಪಡಿಸಿ, ನ.13ರಂದು ರ್ಯಾಲಿ ಆಯೋಜಿಸಿದ್ದು, ಪಟ್ಟಣದ ಭ್ರಮರಾಂಬಾ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಧ್ಯಕ್ಷ ಬಸ್ಸಣ್ಣ ತೊಂತನಾಳ ತಿಳಿಸಿದ್ದಾರೆ.