ವಿವಿಧ ಕಾಮಗಾರಿಗೆ ಶಾಸಕ ನಾಯಕ ಚಾಲನೆ
ದೇವದುರ್ಗ: ತಾಲೂಕಿನ ಮತದಾರರು ತಮ್ಮ ಮೇಲಿಟ್ಟ ವಿಶ್ವಾಸಕ್ಕೆ ಧಕ್ಕೆಯಾಗದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ವೆಂಕಟೇಶ ನಾಯಕ ಭರವಸೆ ನೀಡಿದರು.
ತಾಲೂಕಿನ ರಾಮನಾಳ ಗ್ರಾಮದಲ್ಲಿ ಸೋಮವಾರ 5 ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ 10 ಲಕ್ಷ ವೆಚ್ಚದ ಅನುಭವ ಮಂಟಪ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಪ್ರತಿ ಹಳ್ಳಿಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ. ಹಂತಹಂತವಾಗಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
ರಾಮನಾಳ ಮತ್ತು ಯಮನಾಳ ಗ್ರಾಮದ ಸಿಸಿ ರಸ್ತೆ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಶಾಸಕರು ಈ ವೇಳೆ ಭರವಸೆ ನೀಡಿದರು.
ಸಾನ್ನಿಧ್ಯವನ್ನು ಬಸವ ದೇವರು ವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಬಾಪೂಗೌಡ ಪಾಟೀಲ್ ಚಿಕ್ಕಹೊನ್ನಕುಟಿ ಮಾತನಾಡಿದರು. ವಿಎಸ್ಸೆಸ್ಸೆನ್ ಅಧ್ಯಕ್ಷ ಲಿಂಗನಗೌಡ ಕೊಪ್ಪರ, ಶೇಖರಪ್ಪ ಗೌಡ, ತಾಪಂ ಮಾಜಿ ಸದಸ್ಯ ಹಸೇನಸಾಬ, ಕೊಪ್ಪರ ಗ್ರಾಪಂ ಮಾಜಿ ಅಧ್ಯಕ್ಷ ಸುಲ್ತಾನ ಬಾಬಾ, ಅಮಾತೆಪ್ಪ ದೇವರಮನಿ, ಬಸ್ಸನಗೌಡ ರಾಮನಾಳ, ಮಲ್ಲಣಗೌಡ, ಭೀಮನಗೌಡ ರಾಮನಾಳ, ಕೊಪ್ಪರ ಗ್ರಾಪಂ ಪಿಡಿಒ ಅಣ್ಣಾರಾವ್ ಸೇರಿ ಅನೇಕರಿದ್ದರು.