ಸಾಹಿತ್ಯ ಸಮ್ಮೇಳನ: ನೋಂದಣಿಗೆ ಮನವಿ
ರಾಯಚೂರು: ಮಡಿಕೇರಿಯಲ್ಲಿ ಜ.7 ರಿಂದ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಪಾಲ್ಗೊಳ್ಳ ಬಯಸುವವರಿಗೆ ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾ ಕಸಾಪ ಮನವಿ ಮಾಡಿದೆ.ಪ್ರತಿನಿಧಿಗಳಾಗಿ ಭಾಗವಹಿಸುವರು ತಮ್ಮ ಹೆಸರುಗಳನ್ನು ಡಿ.15ರೊಳಗೆ ಪ್ರತಿನಿಧಿತ್ವ ಶುಲ್ಕ 300 ಕಸಾಪ ತಾಲೂಕು ಘಟಕಗಳ ಅಧ್ಯಕ್ಷರಲ್ಲಿ ಸಂದಾಯ ಮಾಡಿ ರಸೀದಿ ಪಡೆಯಬಹುದು ಎಂದಿದ್ದಾರೆ.
ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಊಟ, ವಸತಿ ಸೌಕರ್ಯದ ವ್ಯವಸ್ಥೆಗಾಗಿ ಹೆಸರು ನೋಂದಾಯಿಸಲು ಸೂಚಿಸಿದ್ದು, ರಾಯಚೂರು ತಾಲೂಕು- ವಿ.ಎನ್.ಅಕ್ಕಿ-9448695901, ಲಿಂಗಸ್ಗೂರು ತಾಲೂಕು-ಶ್ರೀನಿವಾಸ ಪೂಜಾರ್-9686795358, ದೇವದುರ್ಗ ತಾಲೂಕು-ನರಸಿಂಗರಾವ್ ಸರ್ಕಿಲ್-9916674230, ಮಾನವಿ ತಾಲೂಕು- ತಾಯಪ್ಪ ಹೊಸೂರು- 9742474453 ಹಾಗೂ ಸಿಂಧನೂರು ತಾಲೂಕು-ರಮಾದೇವಿ ಶಂಭೋಜಿ-9449689849 ಇವರಲ್ಲಿ ಹೆಸರು ನೋಂದಾಯಿಸಲು ಮನವಿ ಮಾಡಿದ್ದಾರೆ.