ಇಂದಿನಿಂದ ಮದ್ಯ ಮಾರಾಟ ನಿಷೇಧ
ರಾಯಚೂರು: ಜಿಲ್ಲಾದ್ಯಂತ ಮೊಹರಂ ಹಬ್ಬದ ಸಂದರ್ಭ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನ.13 ರಿಂದ 15ರವರೆಗೆ ಜಿಲ್ಲಾದ್ಯಂತ ಮದ್ಯದ ಮಾರಾಟ ನಿಷೇಧಿಸಲಾಗಿದೆ.
ನ.13ರಂದು ಮೊಹರಂ ಹಬ್ಬದ ಶ್ರೀಗಂಧ ರಾತ್ರಿ (ಕತಲ್ ರಾತ್ರಿ) ಮತ್ತು ನ.14ರಂದು ಮೊಹರಂ ಕಡೆಯ ದಿನದ ಧಾರ್ಮಿಕ ಆಚರಿಸಲಾಗುತ್ತದೆ.
ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ನ.13ರ ಬೆಳಗ್ಗೆ 6 ರಿಂದ ನ.15ರ ಬೆಳಗಿನ 6 ಗಂಟೆಯವರೆಗೆ ಮದ್ಯದ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ಅವಧಿಯಲ್ಲಿ ಎಲ್ಲ ಮದ್ಯದ ಅಂಗಡಿಗಳು ಮುಚ್ಚಬೇಕು.
ಮದ್ಯದ ಸಗಟು ಹಾಗೂ ಚಿಲ್ಲರೆ ಮಾರಾಟ ಮಾಡುವಂತಿಲ್ಲ. ಅಕ್ರಮವಾಗಿ ಮದ್ಯ ಸಾಗಣೆ ಮತ್ತು ಮಾರಾಟ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಎಚ್ಚರಿಸಿದ್ದಾರೆ.