ಇಂದಿನಿಂದ ವಿವಿಧ ಕಾರ್ಯಕ್ರಮ
ರಾಯಚೂರು: ನಗರದ ಯಾದವ ಸಂಘದ ಮೈದಾನದಲ್ಲಿರುವ ಕೃಷ್ಣ ದೇವಸ್ಥಾನದಲ್ಲಿ ನ.13ರಿಂದ ಕಾರ್ತಿಕ ಮಾಸದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಈ ಕುರಿತು ಪ್ರಕಟಣೆ ನೀಡಿರುವ ದೇವಸ್ಥಾನ ಸಮಿತಿಯು, ನ.13ರಂದು ಸಂಜೆ 5ಕ್ಕೆ ಹಂದರ ಹಾಕುವುದು, ನ.14ರಂದು ಬೆಳಗ್ಗೆ 6.30ಕ್ಕೆ ಸುಪ್ರಭಾತ, ಬೆಳಗ್ಗೆ 7ಕ್ಕೆ ಪಂಚಾಮೃತ ಅಭಿಷೇಕ, 8ಕ್ಕೆ ವಸ್ತ್ರಾಲಂಕಾರ, ಸಂಜೆ 5ಕ್ಕೆ ಉತ್ಸವ ಹಾಗೂ ಸಂಜೆ 6ಕ್ಕೆ ಕಲ್ಯಾಣೋತ್ಸವ ಮತ್ತು ಸಂದೆ 7ಕ್ಕೆ ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದೆ.ನ.19 ರಂದು ಸಂಜೆ 6.30ಕ್ಕೆ 108 ದೀಪೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಭಕ್ತರು ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ದೇವಸ್ಥಾನ ಸಮಿತಿ ಮನವಿ ಮಾಡಿದೆ.
ಕನಕ ಜಯಂತಿ: ಇಂದು ಸಭೆ
ರಾಯಚೂರು: ನಗರದಲ್ಲಿ ನ. 20ರಂದು ಆಚರಿಸುವ ಕನಕದಾಸರ ಜಯಂತಿ ಅಂಗವಾಗಿ ನ.13ರಂದು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನ.13ರಂದು ಸಂಜೆ 4ಕ್ಕೆ ಶ್ರೀಕನಕದಾಸರ ಜಯಂತಿ ಮಹೋತ್ಸವದ ಪೂರ್ವಭಾವಿ ಸಭೆಯು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭೆಯಲ್ಲಿ ಸಲಹೆ ಸೂಚನೆ ನೀಡಲು ಜಿಲ್ಲಾಡಳಿತ ಕೋರಿದೆ.
15ರವರೆಗೆ ವಿದ್ಯುತ್ ವ್ಯತ್ಯಯ
ರಾಯಚೂರು: ನಗರದ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ವಾಹಕ ಅಳವಡಿಕೆ ಕಾರ್ಯದ ಹಿನ್ನೆಲೆಯಲ್ಲಿ ಅರಬ್ ಮೊಹಲ್ಲಾದಲ್ಲಿ ನ.15 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕೆಪಿಟಿಸಿಎಲ್ ತಿಳಿಸಿದೆ. ವಿದ್ಯುತ್ ಕೇಂದ್ರದಲ್ಲಿ 2 ಎಸಿಎಆರ್ ವಾಹಕದ ಬದಲಾಗಿ ರಾಬಿಟ್ ಎಸಿಎಸ್ಆರ್ ವಾಹಕವನ್ನು ಅಳವಡಿಸುವ ಕಾಮಗಾರಿ ಹಿನ್ನೆಲೆ ನಗರದ ಅರಬ್ ಮೊಹಲ್ಲಾ ಪ್ರದೇಶದಲ್ಲಿ ನ.15ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.