ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಸ್ಪೀಟ್ ಆಡುತ್ತಿದ್ದ 12 ಜನರ ಬಂಧನ, ರು. 44,800 ಜಪ್ತಿ

Rashmi Kasaragodu
Updated On : 13 Nov 2013, 12:07 pm

ರಾಯಚೂರು: ನಗರದ ಬೇರೂನ ಕಿಲ್ಲಾ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಜುನಾಥ ಮತ್ತಿತರೆ 11 ಜನರೆಂದು ಗುರುತಿಸಲಾಗಿದೆ. ಇವರು ಬೇರೂನ್ ಕಿಲ್ಲಾ ಪ್ರದೇಶದ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ದಾಳಿ ಮಾಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ನಗದು 44,800 ಜಪ್ತಿ ಮಾಡಿದ್ದಾರೆ. ಈ ಕುರಿತು ನಗರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ರಾಯಚೂರು: ಲಿಂಗಸ್ಗೂರು ತಾಲೂಕಿನ ಗೊಲಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಶಿವಪ್ಪ(28) ಎಂದು ಗುರುತಿಸಲಾಗಿದೆ. ಈತನೊಂದಿಗೆ ಗ್ರಾಮದ ತಿಮ್ಮವ್ವ, ಶಿವಪ್ಪ ಮುದರಂಗಪ್ಪ, ರಂಗಪ್ಪ ಶಿವಪ್ಪ ಎಂಬುವವರು ಹೊಲದ ವಿಷಯಕ್ಕೆ ಸಂಬಂಧಿಸಿ ಆಗಾಗ್ಗೆ ಜಗಳವಾಡುತ್ತಿದ್ದು ಅದರಿಂದ ಜೀವನದಲ್ಲಿ ಬೇಸರಗೊಂಡು ತನ್ನ ಹೊಲದಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
46 ಜೂಜುಕೋರರ ಸೆರೆ
ರಾಯಚೂರು: ಜಿಲ್ಲೆಯ ವಿವಿಧೆಡೆ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ಮಾಡಿರುವ ಪೊಲೀಸರು 46 ಜನ ಜೂಜುಕೋರರನ್ನು ಬಂಧಿಸಿದ್ದಾರೆ. ಜಿಲ್ಲೆಯ ಸಿಂಧನೂರು ನಗರ ಠಾಣೆಯ ವ್ಯಾಪ್ತಿಯಲ್ಲಿ ಜೂಜಾಡುತ್ತಿದ್ದ 10 ಜನರನ್ನು ಬಂಧಿಸಿ ಅವರಿಂದ 50,300 ನಗದು ಜಪ್ತಿ ಮಾಡಿದ್ದಾರೆ.
  ಅದೇ ರೀತಿ ಮಾನವಿ ಠಾಣೆ ವ್ಯಾಪ್ತಿಯಲ್ಲಿ 7 ಜನರನ್ನು ಬಂಧಿಸಿ 14,300, ರಾಯಚೂರಿನ ಸದರ ಬಜಾರ್ ಠಾಣೆಯ ವ್ಯಾಪ್ತಿಯಲ್ಲಿ 17 ಜನರನ್ನು ಬಂಧಿಸಿ ಅವರಿಂದ 10,500 ಜಪ್ತಿ ಮಾಡಿದ್ದಾರೆ. ಅದೇ ರೀತಿ ಮಸ್ಕಿ ಠಾಣೆಯಲ್ಲಿ 12 ಜನ ಜೂಜುಕೋರರನ್ನು ಬಂಧಿಸಿ ಅವರಿಂದ 9,630 ಜಪ್ತಿ ಮಾಡಿದ್ದು, ಒಟ್ಟು 5 ಪ್ರಕರಣಗಳಲ್ಲಿ 46 ಜನರನ್ನು ಬಂಧಿಸಿ ಅವರಿಂದ ಒಟ್ಟು 84,730 ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement