'ಐಸಿಸಿ ಸಭೆ ಕರೆಯಿರಿ'
ಸಿಂಧನೂರು: ಮುನಿರಾಬಾದ್ನಲ್ಲಿ ಕೂಡಲೇ ಐಸಿಸಿ (ನೀರಾವರಿ ಸಲಹಾ ಸಮಿತಿ) ಸಭೆ ಕರೆಯಬೇಕೆಂದು ಮಾಜಿ ಶಾಸಕ ವೆಂಕಟರಾವ ನಾಡಗೌಡ ಒತ್ತಾಯಿಸಿದರು.
ಬೇಸಿಗೆ ಬೆಳೆಯ ಸಸಿ ಮಡಿ ಹಾಕಲು ನೀರು ಅಗತ್ಯವಾಗಿದೆ. ಸಭೆಯನ್ನು ತುರ್ತಾಗಿ ಕರೆದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಬಿಡುವ ನಿರ್ಣಯಗಳನ್ನು ರೈತಾಪಿ ವರ್ಗಕ್ಕೆ ತಿಳಿಸಬೇಕಿದೆ. ನೀರು ಹರಿಸುವ ದಿನಾಂಕ, ಎಷ್ಟು ಹಂತಗಳಲ್ಲಿ, ಎಷ್ಟು ಪ್ರಮಾಣದ ನೀರನ್ನು ಬಿಡಲಾಗುವುದು ಎಂದು ನಿಖರ ಮಾಹಿತಿಯನ್ನು ರೈತರಿಗೆ ತಿಳಿಸಿದರೆ, ಅದರ ಆಧಾರದ ಮೇಲೆ ಸಸಿ ಮಡಿ ಹಾಕಲು ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.