ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಳ್ಳನ ಬಂಧನ; 8 ಬೈಕ್ ಜಪ್ತಿ

Rashmi Kasaragodu
Updated On : 14 Nov 2013, 1:02 am

ರಾಯಚೂರು: ಹೈದರಾಬಾದಿನಿಂದ ಬೈಕ್ ಕಳವು ಮಾಡಿ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದ ಬೈಕ್ ಕಳ್ಳನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತನನ್ನು ಜಿ.ಕೃಷ್ಣಮೋಹನ್ ಎಂದು ಗುರುತಿಸಲಾಗಿದೆ. ಈತ ಹೈದರಾಬಾದಿನಲ್ಲಿ ಕಳವು ಮಾಡಿದ್ದ ಬೈಕ್ ಗಳನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದು, ಕಳ್ಳನಿಂದ 8 ಬೈಕ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಎಂ.ಎನ್. ನಾಗರಾಜ್, ತಾಲೂಕಿನ ಶಕ್ತಿನಗರ ರಸ್ತೆಯ ಯರಮರಸ್ ಸಮೀಪ  ಠಾಣೆಯ ಪೊಲೀಸರಿಗೆ ಬೈಕ್ ಕಳ್ಳ ಜಿ.ಕೃಷ್ಣ ಮೋಹನ್ ಸಿಕ್ಕುಬಿದ್ದಿದ್ದಾನೆಂದು ತಿಳಿಸಿದರು. ಸುಮಾರು 4 ಲಕ್ಷ ಮೌಲ್ಯದ ಎಂಟು ಬೈಕ್  ವಶಕ್ಕೆ ಪಡೆದಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಕ್ಲಿಷ್ಟ ಪ್ರಕರಣ: ನಗರದ ಆಶಾಪುರ ರಸ್ತೆಯಲ್ಲಿನ ರಾಜಮಾತಾ ದೇವಸ್ಥಾನದ ಆವರಣದಲ್ಲಿನ ವೆಂಕಟೇಶ್ವರ ದೇವಾಲಯದಲ್ಲಿ ಬುಧವಾರ ಬೆಳಗಿನ ಜಾವ ನಡೆದ ಕಳವಿನ ಪ್ರಕರಣದ ಬಗ್ಗೆ ತನಿಖೆ ಜಾರಿಯಲ್ಲಿದ್ದು, ಬಹಳ ಕ್ಲಿಷ್ಟಕರ ಪ್ರಕರಣ ಇದಾಗಿದೆ. ದೇವಾಲಯದ ಅಲ್ಮೇರಾದಲ್ಲಿನ ಹಣ, ಮೂರ್ತಿಕವಚ, ವಿಗ್ರಹ ಮತ್ತು ರಾಜಮಾತಾ ಮೂರ್ತಿಯಲ್ಲಿದ್ದ ಆಭರಣಗಳತ್ತ ಹೊರಳಿಯೂ ನೋಡದ ಕಳ್ಳರು, ಕೇವಲ ವೆಂಕಟೇಶ್ವರ ದೇವರ ಆಭರಣ ಮಾತ್ರ ಕಳುವಾಗಿರುವುದು ಅಚ್ಚರಿ ತಂದಿದೆ ಎಂದರು.
  ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಡಿಎಸ್ಪಿ ಎಂ.ಪಾಷಾ ಮತ್ತು ಪಶ್ಚಿಮ ಠಾಣೆ ಸಿಪಿಐ ವಿನೋದ್ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದೆ. ವೈಜ್ಞಾನಿಕ ತನಿಖೆ ನಡೆಸಲು ಆದೇಶಿಸಿರುವುದಾಗಿ ಹೇಳಿದರು. ಡಿಎಸ್ಪಿ ಎಂ.ಪಾಷಾ, ಗ್ರಾಮೀಣ ಠಾಣೆ ಪಿಎಸ್ಐ ಬಸವರಾಜ ಮತ್ತು ಸಿಬ್ಬಂದಿಯಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement