ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿಜ್ಞಾನ ಕೇಂದ್ರದಲ್ಲಿ ಬಯೋಸ್ಪಾರ್ಕ್ ಕಾರ್ಯಕ್ರಮಕ್ಕೆ ಚಾಲನೆ

Rashmi Kasaragodu
Updated On : 14 Nov 2013, 1:10 am

ರಾಯಚೂರು: ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ದೇವದುರ್ಗ ಮತ್ತು ಮಾನವಿ ತಾಲೂಕಿನ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಬಯೋಸ್ಪಾರ್ಕ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ರಾಯಚೂರು ಕೃಷಿ ವಿವಿಯ ಬೀಜ ವಿಜ್ಞಾನ ಮತ್ತು ತಾಂತ್ರಿಕತೆ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್. ವಾಸುದೇವನ್ ಉದ್ಘಾಟಿಸಿದರು.
ಮೂಲ ವಿಜ್ಞಾನದತ್ತ ಲಕ್ಷ್ಯವಹಿಸಿ: ನಂತರ ಮಾತನಾಡಿದ ಅವರು, ದೇಶದಲ್ಲಿ ಯುವ ಸಂಪನ್ಮೂಲ ಅಧಿಕವಿದ್ದು, ಅದರ ಸದ್ಬಳಕೆಯ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಮೂಲ ವಿಜ್ಞಾನದ ಕಡೆಗೆ ಮುಖ ಮಾಡುವುದು ಬಹಳ ಅವಶ್ಯಕವಿದೆ. ಖ್ಯಾತ ವಿಜ್ಞಾನಿಗಳು ಹಾಗೂ ನೋಬೆಲ್ ವಿಜೇತರೆಲ್ಲ ಸಾಮಾನ್ಯ ಕುಟುಂಬದಿಂದ ಬಂದವರು ಎಂದರು. ಡಿಡಿಪಿಐ ರಾಮಾಂಜನೇಯ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ. ವಿಜ್ಞಾನದಲ್ಲಿ ಸಾಧನೆಗೆ ವಿಪುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಗಮನಹರಿಸಿ ಶ್ರಮ ವಹಿಸಿ ಸಾಧನೆ ಮೆರೆಯಲು ಸಲಹೆ ನೀಡಿದರು.
ವಿಜ್ಞಾನ ಅಧ್ಯಯನದಲ್ಲಿ ತೊಡಗಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಸಿ.ವಿ. ಪಾಟೀಲ್, ವಿದ್ಯಾರ್ಥಿಗಳಲ್ಲಿ ಜೀವವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜ್ಞಾನ ವಿಷಯಗಳ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರುವಂತೆ ಅವರು ಮನವಿ ಮಾಡಿದರು.
ಕಲ್ಬುರ್ಗಿ ವಿವಿಯ ಡಾ. ವಿ.ಎಚ್. ಮೂಲಿಮನಿ, ಡಾ. ಎ.ಮೌಲಿಶ್ರೀ ಮಾತನಾಡಿದರು. ಈ ವೇಳೆ ರಸಪ್ರಶ್ನೆಯಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ವೇದಿಕೆಯಲ್ಲಿ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪ್ರೊ. ಸಿ.ಡಿ. ಪಾಟೀಲ್, ಮಾನವಿಯ ಬಿಇಒ ಚಂದ್ರಶೇಖರ್ ದೊಡ್ಡಮನಿ ಮತ್ತು ವಿದ್ಯಾರ್ಥಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement