ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

Mainashree
Updated On : 15 Nov 2013, 1:01 am

ಅಮರೇಶಸ್ವಾಮಿ ಬಲ್ಲಟಗಿ
ಲಿಂಗಸ್ಗೂರು: ಸ್ಥಳೀಯ ಕೃಷಿ ಇಲಾಖೆ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು, ಬೆರಳೆಣಿಕೆ ಅಧಿಕಾರಿ, ಸಿಬ್ಬಂದೆಯಿಂದಾಗಿ ರೈತರು ಕೃಷಿ ಕಾರ್ಯ ಕುರಿತು ಸಮರ್ಪಕ ಮಾಹಿತಿ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಹಿತಿ ಕೊರತೆ: ತಾಲೂಕಿನಲ್ಲಿ 192 ಗ್ರಾಮಗಳ ವ್ಯಾಪ್ತಿಯಲ್ಲಿ 1.94 ಲಕ್ಷ ಹೆಕ್ಟೇರ್ ಭೂ ಪ್ರದೇಶದ ಪೈಕಿ 2013-14ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ನೀರಾವರಿ 1200, ಖುಷ್ಕಿ 90,900 ಬಿತ್ತನೆ ಗುರಿಯಲ್ಲಿ ನೀರಾವರಿ 13,864 ಹಾಗೂ ಖುಷ್ಕಿ 68,388 ಸೇರಿ ಒಟ್ಟು 82,252 ಹೆಕ್ಟೇರ್ (ಶೇ. 89ರಷ್ಟು) ಪ್ರದೇಶದಲ್ಲಿ ರೈತರು ಜೋಳ, ಮೆಕ್ಕೆಜೋಳ, ಗೋಧಿ, ಕಡಲೆ, ಹುರಳಿ, ಸೂರ್ಯಕಾಂತಿ, ಕುಸುಬೆ, ಅಗಸಿ, ಶೇಂಗಾ, ಕಬ್ಬು, ಭತ್ತ ಸೇರಿದಂತೆ ವಿವಿಧ ಬೆಳೆ ಬಿತ್ತನೆ ಮಾಡಿರುತ್ತಾರೆ. ಭೂಮಿಯ ಗುಣಮಟ್ಟ, ಬಿತ್ತನೆ ಬೀಜ, ರಸ ಗೊಬ್ಬರ, ಕೀಟಬಾಧೆ, ಕ್ರಿಮಿನಾಶಕ ಸಿಂಪಡಣೆ ಸೇರಿದಂತೆ ವಿವಿಧ ರೀತಿಯ ಮಾಹಿತಿ ಪಡೆಯಲು ಬರುವ ರೈತರು ಸಿಬ್ಬಂದಿಯಿಲ್ಲದೆ ಬಂದ ದಾರಿಗೆ ಸುಂಕವಿಲ್ಲವೆಂದು ನಿರಾಶೆಯಿಂದ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷಿ ಇಲಾಖೆಯಲ್ಲಿ 2 ಕೃಷಿ ಅಧಿಕಾರಿ ಹುದ್ದೆ ಖಾಲಿ ಇವೆ. ರೈತ ಸಂಪರ್ಕ ಕೇಂದ್ರಗಳಲ್ಲಿ 4 ಕೃಷಿ ಅಧಿಕಾರಿ ಹುದ್ದೆ ಖಾಲಿ ಇರುತ್ತವೆ. ಕೃಷಿ ಇಲಾಖೆಯ ಜಿಪಂ ಇಲಾಖೆಗೆ ಒಳಪಡುವ ಸಹಾಯಕ ಕೃಷಿ ಅಧಿಕಾರಿಗಳ 3 ಹುದ್ದೆ ಖಾಲಿ ಇವೆ. ಅದೇರೀತಿ ತಾಪಂ.ಗೆ ಒಳಪಡುವ 8 ಹುದ್ದೆಗಳು ಖಾಲಿ ಇರುತ್ತವೆ. ಕೃಷಿ ಇಲಾಖೆಯಲ್ಲಿ 1 ಬೆರಳಚ್ಚುಗಾರ ಹುದ್ದೆ, 1 ವಾಹನ ಚಾಲಕ ಹುದ್ದೆ ಹಾಗೂ 3 ಡಿ-ಗ್ರೂಪ್ ನೌಕರರ ಹುದ್ದೆಗಳು ಖಾಲಿ ಇರುತ್ತವೆ. ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಒಬ್ಬ ಕೃಷಿ ಅಧಿಕಾರಿ ಹಾಗೂ 6 ಜನ ಸಹಾಯಕ ಕೃಷಿ ಅಧಿಕಾರಿಗಳು ಇರಬೇಕು. ಆದರೆ ಲಿಂಗಸ್ಗೂರು ಮತ್ತು ಗುರುಗುಂಟಾ ರೈತ ಸಂಪರ್ಕ ಕೇಂದ್ರಗಳಲ್ಲಿ ತಲಾ 3 ಜನ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement