'ಡಿ ದರ್ಜೆ ನೌಕರರೆಂದು ಘೋಷಿಸಿ'
ದೇವದುರ್ಗ: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರಾಗಿ ಘೋಷಿಸುವಂತೆ ಗ್ರಾಮ ಸಹಾಯಕರ ಸಂಘ ಒತ್ತಾಯಿಸಿದೆ.
ಈ ಕುರಿತು ಶಾಸಕ ವೆಂಕಟೇಶ ನಾಯಕ ಅವರಿಗೆ ಮನವಿ ಸಲ್ಲಿಸಿ, ಗ್ರಾಮ ಸಹಾಯಕರು ಕೆಳಹಂತದಲ್ಲಿ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಸೇವಾ ಭದ್ರತೆಯಿಲ್ಲದೇ ಗರಿಷ್ಠ ಮಟ್ಟದಲ್ಲಿ ಶ್ರಮಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿನ ಭೂಕಂದಾಯ ವಸೂಲಿ, ಜನನ ಮರಣ ಮಾಹಿತಿ ಸರ್ಕಾರದ ಪ್ರತಿಯೊಂದು ಆದೇಶ ಜನಸಾಮಾನ್ಯರಿಗೆ ತಲುಪಿಸುತ್ತಿದ್ದಾರೆ. ಆದರೆ ಇಂಥ ನೌಕರರ ಬೇಡಿಕೆಗೆ ಸರ್ಕಾರ ಮನ್ನಿಸಿಲ್ಲ ಎಂದು ದೂರಿದರು.
ಕೂಡಲೇ ದಶಕಗಳಿಂದಲೂ ಯಾವುದೇ ಸೇವಾ ಭದ್ರತೆಯಿಲ್ಲದೇ ಸೇವಾ ಕಾಯಮಾತಿಯಿಲ್ಲದೇ ದುಡಿಯುತ್ತಿರುವ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರನ್ನಾಗಿಸಲು ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಗೌರವಾಧ್ಯಕ್ಷ ಆನೀಫ್ ನಾಗಡದಿನ್ನಿ, ಶಿವಪ್ಪ ದೇವದುರ್ಗ, ಭೀಮರಾಯ, ಇಮಾಂಸಾಬ್, ಜಂಬಣ್ಣ ಅರಕೇರಾ, ಪ್ರಭಣ್ಣ ಇನ್ನಿತರರು ಒತ್ತಾಯಿಸಿದ್ದಾರೆ.