ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾದ ಪದಾಧಿಕಾರಿಗಳ ಪಟ್ಟಿ
ಸಿಂಧನೂರು: ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ಅಶೋಕ ಉಮಲೂಟಿ ಬಿಡುಗಡೆ ಮಾಡಿದರು.
ಉಪಾಧ್ಯಕ್ಷರಾಗಿ ಶೇಷಪ್ಪ ರಾಯಚೂರು, ಕೆ. ಜಾಕೋಬ್ ಕುರ್ತಿ ರಾಯಚೂರು, ನರಸಪ್ಪ ಜೂಕೂರು ಮಾನ್ವಿ, ಜನಾರ್ಧನ ಗಬ್ಬೂರು, ಬಸವರಾಜ ಲಾಲಪ್ಪ ಪರಾಪುರ, ತಿಪ್ಪಣ್ಣ ಚನ್ನಳ್ಳಿ (ಸಿಂಧನೂರು), ಪ್ರಧಾನ ಕಾರ್ಯದರ್ಶಿಯಾಗಿ ಗುರುರಾಜ ಯರ್ರಂ ರಾಯಚೂರು, ಕಾರ್ಯದರ್ಶಿಗಳಾಗಿ ಜಿ. ಆಂಜನೇಯ ದುಬ್ಬನ್ನ ರಾಯಚೂರು, ಗೋವಿಂದು ಮುರಾನಪುರ ತಾಂಡಾ ಮಾನ್ವಿ, ಶ್ರೀಕಾಂತ ಮಾನ್ವಿ, ರಾಮು ದಡೇಸ್ಗೂರು, ಆಂಜನೇಯ ಕಲ್ಲೂರು, ಮೌನೇಶ ಕರಡಕಲ್, ಹುಸೇನಪ್ಪ ಗುತ್ತೇದಾರ ಜಾಲಹಳ್ಳಿ, ಕಾರ್ಯಾಲಯ ಕಾರ್ಯದರ್ಶಿಯಾಗಿ ದಿನೇಶ ಯಾಪಲದಿನ್ನಿ, ಜಿಲ್ಲಾ ಕೋಶಾಧ್ಯಕ್ಷ ಜೆಂಗ್ಲೆಪ್ಪ ರಾಯಚೂರು, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ರಮೇಶ ಕರಡಕಲ್, ಗವಿಸಿದ್ದಪ್ಪ ತುರ್ವಿಹಾಳ, ಅಮರೇಶ ಹಳ್ಳಿ ಮಾನ್ವಿ, ವೀರೇಶ ಗೊರೇಬಾಳಕ್ಯಾಂಪ್, ರಾಘವೇಂದ್ರ ಸೋಮಲಾಪುರ, ಅಮರೇಶ ಹಟ್ಟಿ ಲಿಂಗಸ್ಗೂರು, ಚಿನ್ನಿ ರಾಯಚೂರು ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪಕ್ಷವನ್ನು ಬೇರು ಮಟ್ಟದ ಸಂಘಟನೆಗಾಗಿ ಜಿಲ್ಲಾದ್ಯಂತ ಪ್ರವಾಸ ಮಾಡುತ್ತೇವೆ. ಎಸ್ಸಿ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ಕೈ ಜೋಡಿಸಲಿದ್ದಾರೆ ಎಂದರು.