ವೃದ್ಧಾಶ್ರಮ ಸ್ಥಾಪನೆಗೆ ಅರ್ಜಿ ಕರೆ
ರಾಯಚೂರು: ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಸ್ಥಾಪನೆ ಹಾಗೂ ವೃದ್ಧಾಶ್ರಮ ಕೇಂದ್ರ ತೆರೆಯಲು ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಸೇವಾ ಸಂಸ್ಥೆಗಳು ಕನಿಷ್ಟ 5 ವರ್ಷಗಳ ಅನುಭವದ ದಾಖಲೆ ಹೊಂದಿರಬೇಕು.
ಐದು ವರ್ಷಗಳ ಆಡಿಟ್ ವರದಿ ಬೈಲಾಗಳೊಂದಿಗೆ ಹಾಗೂ ಮಹಿಳಾ ಮಕ್ಕಳ ಯೋಜನೆಯಡಿ ನಡೆಯುತ್ತಿರುವ ಯೋಜನೆಗಳಲ್ಲಿ ಭಾಗಿಯಾಗಿರುವರಾಗಿರಬೇಕು. ಸರ್ಕಾರ, ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಆದೇಶಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು.
ಸ್ವಯಂ ಸೇವಾ ಸಂಸ್ಥೆಗಳ ವಿರುದ್ಧ ಯಾವುದೇ ತರಹದ ದಾವೆಗಳಿರಬಾರದು. ಅರ್ಹ ಸಂಸ್ಥೆಗಳು ಅರ್ಜಿಗಳನ್ನು ನ.26 ರೊಳಗೆ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಯಚೂರು ಇವರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ 08532-280358 ಇಲ್ಲಿಂದ ಪಡೆಯಬಹುದು.