ಶಿಕ್ಷಣ ತೇರಿಗೆ ಅದ್ಧೂರಿ ಸ್ವಾಗತ
ಸಿಂಧನೂರು: ಜಯ ಕರ್ನಾಟಕ ಸಂಘಟನೆಯಿಂದ ಹಮ್ಮಿಕೊಂಡಿರುವ ಏಕರೂಪ ಶಿಕ್ಷಣ ತೇರು ನಗರಕ್ಕೆ ಆಗಮಿಸಿದಾಗ ತಾಲೂಕು ಸಮಿತಿ ತೇರನ್ನು ಅದ್ಧೂರಿಯಾಗಿ ಬರಮಾಡಿ ಕೊಂಡಿತು.
ಸಂಘಟನೆಯ ರಾಜ್ಯಾಧ್ಯಕ್ಷ ವೀರಣ್ಣ ಕೊರಳ್ಳಿ ತೇರಿನ ಮುಂದೆ ಜ್ಯೋತಿ ಬೆಳಗಿಸಿ ತೆಂಗಿನಕಾಯಿ ಹೊಡೆದು ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ದೊರಕುವಂತಾಗಬೇಕು. ಬಡವರಿಗೆ ಕಡಿಮೆ, ಶ್ರೀಮಂತರಿಗೆ ಹೆಚ್ಚು ಎನ್ನುವ ತಾರತಮ್ಯ ಇರಬಾರದು. ಪ್ರತಿಯೊಬ್ಬರಿಗೂ ಏಕರೂಪದ ಶಿಕ್ಷಣ ಸಿಗುವಂತಾಗಬೇಕು ಎಂದರು.
ಗುಲ್ಬರ್ಗ ವಿಭಾಗೀಯ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ತಾಲೂಕು ಅಧ್ಯಕ್ಷ ಬಸವರಾಜ ಬಡಿಗೇರ, ಎಂ.ಎಸ್. ಮುತ್ತು, ಹುಸೇನಸಾಬ, ನರಸಪ್ಪ ಅಮರಾಪುರ, ಮುನ್ನಾ, ಮಹೇಶ ಮತ್ತಿತರರು ಉಪಸ್ಥಿತರಿದ್ದರು.