ಸಂಕ್ಷಿಪ್ತ ಸುದ್ದಿ
ತೋಟಗಾರಿಕೆ ಅಭಿವೃದ್ಧಿ ಯೋಜನೆ
ರಾಯಚೂರು: ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೈ.ಕ. ಭಾಗದ ಗ್ರಾಮೀಣ ಪ್ರದೇಶದಲ್ಲಿ ಹಣ್ಣಿನ ಮತ್ತು ತರಕಾರಿ ತೋಟ ಗಳ ಅಭಿವೃದ್ಧಿಗೆ ಅರ್ಜಿ ಕರೆಯಲಾಗಿದೆ.ಹಣ್ಣು, ತರಕಾರಿಗಳನ್ನು ಅಂಗನವಾಡಿ ಕೇಂದ್ರದ ಆವರಣ, ಶಾಲಾ ಕೈತೋಟ, ಗ್ರಾಪಂ ಕಚೇರಿ ಆವರಣ, ವಿದ್ಯಾರ್ಥಿ ನಿಲಯಗಳಿಗೆ 30 ಸಸಿ ಹಾಗೂ ಶಾಲಾ ಮಕ್ಕಳ ಮನೆ ಅಂಗಳದ ಕೈತೋಟದಲ್ಲಿ 23 ಗಿಡಗಳನ್ನು ವಿತರಿಸುವ ಯೋಜನೆ ಅನುಷ್ಠಾನಕ್ಕೆ ಆಸಕ್ತರಿಂದ ಅರ್ಜಿ ಕರೆದಿದ್ದು, ಫಲಾನುಭವಿ ಶಾಲೆ, ಅಂಗನವಾಡಿ, ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿರುವವ ರಾದಲ್ಲಿ ಶಾಲೆಯ ಮುಖ್ಯಸ್ಥರಿಂದ ಶಿಫಾರಸು ಪತ್ರದೊಂದಿಗೆ ನಿಗದಿತ ಅರ್ಜಿಯನ್ನು ತಾಲೂಕು ತೋಟಗಾರಿಕೆ ಇಲಾಖೆಯ ಕಚೇರಿಯಿಂದ ಪಡೆದು ಸಲ್ಲಿಸಬೇಕು. ಮಾಹಿತಿಗಾಗಿ ತಾಲೂಕಿನ ಹಿರಿಯ ಸಹಾಯಕ ನಿರ್ದೇಶಕರು ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.
ಮಕ್ಕಳ ದಿನಾಚರಣೆ ಕಾರ್ಯಕ್ರಮ
ದೇವದುರ್ಗ: ದೇಶದ ಮಾಜಿ ಪ್ರಧಾನಿ ಪಂ. ಜವಾಹರಲಾಲ್ ನೆಹರು ಜಯಂತಿಯ ಅಂಗವಾಗಿ ಗುರುವಾರ ತಾಲೂಕಿನ ನಾಗಡದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.ಗ್ರಾಮದ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ನೆಹರು Ú ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಹೊಟ್ಟೆನೋವು: ವ್ಯಕ್ತಿ ಆತ್ಮಹತ್ಯೆ
ರಾಯಚೂರು: ಮಾನವಿ ಪಟ್ಟಣದಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತನನ್ನು ಪಂಪಾಪತಿ ಎಂದು ಗುರುತಿಸಲಾಗಿದೆ. ಈತ ಕಳೆದೊಂದು ವರ್ಷದಿಂದ ಹೊಟ್ಟೆನೋವುನಿಂದ ಬಳಲುತ್ತಿದ್ದು, ಅದರಿಂದ ಜೀವನದಲ್ಲಿ ಬೇಸತ್ತು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.ಈ ಕುರಿತು ಮಾನವಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.