ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ಸೂಕ್ತ
ಗುಲ್ಬರ್ಗ/ಶಹಾಬಾದ್: ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ, ಕುತಂತ್ರ ರಾಜಕಾರಣದ ಅವಧಿ ಮುಗಿದಿದ್ದು ನವಭಾರತ ನಿರ್ಮಾಣಕ್ಕಾಗಿ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಸೂಕ್ತ ವ್ಯಕ್ತಿಯಾಗಿದ್ದು ಈ ದೇಶಕ್ಕೆ ಆಶಾಕಿರಣವಾಗಿದ್ದಾರೆಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಹೇಳಿದರು.
ಕೆಲ್ಲೂರಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ನಾಲವಾರ ವಲಯ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿ ಮಾತನಾಡಿ, ದೇಶದ ಗಡಿ ರಕ್ಷಿಸುವಲ್ಲಿ ಕೇಂದ್ರ ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನ.17ರಂದು ಬೆಂಗಳೂರಿನಲ್ಲಿ ನಡೆಯುವ ನರೇಂದ್ರ ಮೋದಿಯವರ ರ್ಯಾಲಿಯೊಂದಿಗೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿಲಿದೆ ಎಂದರು.
ನನ್ನ ಅಧಿಕಾರಾವಧಿಯಲ್ಲಿ ಮತದಾರರ ಋಣ ತೀರಿಸುತ್ತ ಬಂದಿದ್ದು, ಪಕ್ಷದ ನಿರ್ದೇಶನದಂತೆ ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧನಿದ್ದು, ಮತದಾರರು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರರಡ್ಡಿ ಪರಸರೆಡ್ಡಿ, ಬಿಜೆಪಿ ತಾಲೂಕಾಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೋರೆ, ನಾಲವಾರ ಶಕ್ತಿ ಕೇಂದ್ರದ ಅಧ್ಯಕ್ಷ ಶರಣಗೌಡಕರೆಡ್ಡಿ ಕೊಲ್ಲೂರ, ಪ್ರಧಾನ ಕಾರ್ಯದರ್ಶಿ ಗೋಪಿಚಂದ ರಾಠೋಡ, ಮುಖಂಡರಾದ ಡಾ. ವೀರೇಶ ಎಣ್ಣಿ, ಚನ್ನಬಸಪ್ಪಗೌಡ ಮಾರಗಡಿ, ಮಹೇಶಗೌಡ, ಶರಣಗೌಡ ಸೂಗೂರ, ಸಿದ್ದಣ್ಣ ಕಲಶೆಟ್ಟಿ, ತಮ್ಮಣ್ಣ ಡಿಗ್ಗಿ, ಶಂಕರಗೌಡ ಮಾಲಿ ಪಾಟೀಲ್ ಮಾರಡಗಿ, ಸಾಬಣ್ಣ ಜಾಲಗಾರ, ಮಲ್ಲಣ್ಣ ಪೂಜಾರಿ ಇತರರು ಇದ್ದರು. ವೆಂಕಟೇಶ ದುರ್ಗದ ಕಾರ್ಯಕ್ರಮ ನಿರೂಪಿಸಿದರು. ಮಹಿಪಾಲರೆಡ್ಡಿಗೌಡ ಸೂಗೂರ ವಂದಿಸಿದರು.