ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮಾನತೆ ಸಾರಿದ ಬಸವಣ್ಣ: ಶಂಕ್ರಪ್ಪ

Rashmi Kasaragodu
Updated On : 16 Nov 2013, 12:07 pm

ಸಿಂಧನೂರು: ಜಾತಿ ಭೇದವಿಲ್ಲದೆ ಎಲ್ಲ ಸಮುದಾಯದವರು ಸಮಾನರೆಂದು ಜಗತ್ತಿಗೆ ಸಾರಿದ್ದು ವಿಶ್ವಗುರು ಬಸವಣ್ಣ ಎಂದು ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷ ಎನ್.ಶಂಕ್ರಪ್ಪ ಹೇಳಿದರು.
ನಗರದ ಬಸವ ಸಮಿತಿ ಹಾಗೂ ಬಸವಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಅಂದಾಗ ಮಾತ್ರ ನಾವು ಉತ್ತಮ ರೀತಿಯಾಗಿ ಬದುಕಲು ಸಾಧ್ಯವಾಗುತ್ತದೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ಯುವಕರು ವಿದ್ಯಾವಂತರಾಗಿ ಶರಣರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮವನ್ನುದ್ದೇಶಿಸಿ ಬಸವಕೇಂದ್ರದ ಪಿ.ವೀರಭದ್ರಪ್ಪ ಕುರುಕುಂದಿ, ಡಾ. ಚನ್ನನಗೌಡ, ಗೋವಿಂದರಾಜ ಬಾರಕೇರಾ ಮಾತನಾಡಿದರು.
ರಮೇಶ ಸಜ್ಜನ್, ಡಿ.ಎಚ್. ಕಂಬಳಿ, ಚಿದಾನಂದಪ್ಪ, ಗೋವಿಂದರಾಜ ಬಾರಕೇರಾ, ವೀರೇಶ ಅಂತರಗಂಗಿ, ಶ್ಯಾಮಣ್ಣ ನಾಯಕ, ಸಿದ್ರಾಮಪ್ಪ ಸಾಹುಕಾರ, ಪಂಪಣ್ಣ ಹಳ್ಳಿ, ಯುವ ಬಸವಕೇಂದ್ರದ ಅಧ್ಯಕ್ಷ ಶೇಖರ ಯರದಿಹಾಳ, ನಿಜಗುಣ ಹಡಪದ, ಅಮರೇಶ ಗುರಿಕಾರ, ಹಡಪದ ಸಮಾಜದ ಯುವಅಧ್ಯಕ್ಷ ಭೀಮಣ್ಣ ಬೆಳಗುರ್ಕಿ, ಕರೇಗೌಡ ಕುರುಕುಂದಿ, ಮತ್ತಿತರರು ಭಾಗವಹಿಸಿದ್ದರು.
ಸನ್ಮಾನ: ಪತ್ರಕರ್ತ ಅಮರೇಶ ಅಲಬನೂರು, ವಿಕಲಚೇತನ ಹನುಮಂತ ನಾಯಕ, ಗ್ರಾಪಂ ಅಧ್ಯಕ್ಷ ವೆಂಕೋಬ, ಅಮರೇಶ, ಮಲ್ಲಪ್ಪ ತಿಡಿಗೋಳ, ಎನ್.ಶಂಕ್ರಪ್ಪ, ರಮೇಶ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement