ಕನಕ ಜಯಂತಿ: ಪ್ರಬಂಧ ಸ್ಪರ್ಧೆ
ಸಿಂಧನೂರು: ಕನಕ ಜಯಂತಿ ಅಂಗವಾಗಿ ತಾಲೂಕ ಆಡಳಿತದಿಂದ ನಗರದ ಪದವಿ ಪೂರ್ವ, ಪದವಿ ಹಾಗೂ ಇತರೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ನ.19ರಂದು ಮಂಗಳವಾರ ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯೆ ಸುಜಾತಾ ಹುನೂರು ತಿಳಿಸಿದ್ದಾರೆ.
ಪ್ರತಿ ಕಾಲೇಜಿನಿಂದ ಒಬ್ಬ ವಿದ್ಯಾರ್ಥಿ ಭಾಗವಹಿಸುವುದು. ಪ್ರಬಂಧದ ವಿಷಯ ಭಕ್ತ ಕನಕದಾಸರ ಸಾಮಾಜಿಕ ಕೊಡುಗೆಗಳು ಪ್ರಬಂಧ ಬರೆಯಲು ಕಾಲಾವಕಾಶ 1 ಗಂಟೆಯಿದ್ದು, ನಗರದ ಕಾಲೇಜುಗಳ ಪ್ರಾಚಾರ್ಯರು ತಮ್ಮ ಕಾಲೇಜುಗಳಿಂದ ಒಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯನ್ನು ಭಾಗವಹಿಸಲು ಕಳುಹಿಸಿಕೊಡಬೇಕು. ವಿಜೇತ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜಯಂತಿಯಂದು ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ 08535 223317 ಸಂಪರ್ಕಿಸಬಹುದು.