ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗುರುನಾನಕ್ ಜಯಂತಿ ಮೆರವಣಿಗೆ

Mainashree
Updated On : 18 Nov 2013, 11:19 am

ಬೀದರ್:  ಸಿಖ್‌ರ ಧರ್ಮ ಗುರುಗಳಾದ ಗುರುನಾನಕದೇವ ಅವರ 544ನೇ ಜಯಂತಿ ನಿಮಿತ್ತ ಭಾನುವಾರ ನಗರದ ಪವಿತ್ರ ಗುರುದ್ವಾರಾದಿಂದ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು.
 ಭಾನುವಾರ ಬೆಳಗ್ಗೆಯಿಂದಲೇ ನಗರದ ಗುರುದ್ವಾರಾ ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯರಾತ್ರಿಯಿಂದಲೇ ಗುರುದ್ವಾರಾದಲ್ಲಿ ಗುರುಗ್ರಂಥ ಸಾಹೀಬ್ ಪಠಣ, ವಿಶೇಷ ಪ್ರಾರ್ಥನೆಗಳು ಜರುಗಿದವು. ಮ.3 ಗಂಟೆ ಸುಮಾರಿಗೆ ಗುರುದ್ವಾರದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನಿಶಾನ ಸಾಹಿಬ್, ಸಿಖ್ ಯುವಕರ ಕತ್ತಿ ವರಸೆ ಪ್ರದರ್ಶನ, ಕೈಯಲ್ಲಿ ಖಡ್ಗ ಹಿಡಿದು ಓಡುವುದು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದವು.
ಮೆರವಣಿಗೆ: ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಿಖ್ ಧರ್ಮೀಯರು ಮೆರವಣಿಗೆಯುದ್ದಕ್ಕೂ ಕೈಯಲ್ಲಿ ಖಡ್ಗ ಹಿಡಿದು ಬೋಲೆ ಸೋನಿಹಾಲ್ ಸಸ್ರಿಯಾಕಾಲ್ ಎಂಬ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ನಡೆದದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಗುರುನಾನಕ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ ಬಲಬೀರ್‌ಸಿಂಗ್, ಸದಸ್ಯರಾದ ಮನಪ್ರೀತಸಿಂಗ್ ಖನೂಜಾ, ಸತಪಾಲ್‌ಸಿಂಗ್, ಡಾ. ನರೇಂದ್ರಸಿಂಗ್ ಸೇರಿದಂತೆ ನಾಂದೇಡ್ ಹಾಗೂ ಮತ್ತಿತರರ ಭಾಗಗಳಿಂದ ಬಂದಂತಹ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement