ಪ್ರಸಾದ ನಿಲಯದಲ್ಲಿ ಇಂದು ಅಂತರ್ಜಾತಿ ವಿವಾಹ
ಬೀದರ್: ಲಿಂಗಾಯತ ಸಮಾಜ ಅಭಿವೃದ್ಧಿ ಸಂಘ ಬೀದರ್ ವತಿಯಿಂದ ನ.18ರಂದು ಅಂತರ್ಜಾತಿ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ, ಪ್ರೊ. ಎಸ್ಬಿ. ಬಿರಾದಾರ ತಿಳಿಸಿದ್ದಾರೆ.
ಬಸವಶಿಶು (ಅನಾಥೆ) ಶ್ರೀದೇವಿ (ಲಿಂಗಾಯತ ಧರ್ಮ) ಇವರೊಂದಿಗೆ ರಾಜಕುಮಾರ (ಜೈನಧರ್ಮ) ಇವರ ಅಂತರ್ಜಾತಿ ವಿವಾಹವು ಬೀದರ್ ನಗರದ ಮೈಲೂರ ರಸ್ತೆಯ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ವಧು-ವರಿಗೆ ಆಶೀರ್ವದಿಸಲಿದ್ದಾರೆ ಎಂದು ತಿಳಿಸಿದ್ದಾರೆ.