ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಪ್ರಮುಖ

Mainashree
Updated On : 18 Nov 2013, 11:18 am

ಬೀದರ್:  ಇಂದಿನ ಮಕ್ಕಳು ಮುಂದಿನ ದೇಶದ ಪ್ರಜೆಗಳಾಗಿದ್ದರಿಂದ ಮಕ್ಕಳು ತಮ್ಮ ಜೀವನ ರೂಪಿಸಿಕೊಳ್ಳಲು ಬಲಿಷ್ಠರಾಗಬೇಕು ಎಂದು ಡಾನ್ ಬಾಸ್ಕೋ ನಿರ್ದೇಶಕ ಫಾದರ್ ಕ್ರಿಸ್ತರಾಜ ನುಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೀದರ್ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಸಪ್ತಾಹ ನಿಮಿತ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮುಖ್ಯವಾಗಿದ್ದು ಮಕ್ಕಳಿಗೆ ವಿವಿಧ ಹಾಡು ಹಾಗೂ ಕಥೆಗಳನ್ನು ಹೇಳುವುದರೊಂದಿಗೆ ಮನರಂಜಿಸಿದರು.
ಮಕ್ಕಳಿಗೆ ಸುಗ್ಗಿ ಕುಣಿತ: ಸಂಪನ್ಮೂಲ ವ್ಯಕ್ತಿಗಳಾಗಿದ್ದ ಜಾನಪದ ಕಲಾವಿದ ದೇವದಾಸ ಚೀಮಕೋಡೆ ಅವರು ಮಕ್ಕಳಿಗೆ ತಮಟೆ, ಹಲಗೆ ನುಡಿಸುವುದರ ಮುಖಾಂತರ ಮಕ್ಕಳಿಗೆ ಸುಗ್ಗಿ ಕುಣಿತ ಕಲಿಸಿದರು, ಮಕ್ಕಳು ಕುಣಿತದ ಮೂಲಕ ಸಂತೋಷ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರತ್ನಾ ಕಲಮದಾನಿ ಮಾತನಾಡಿ, ಮಕ್ಕಳ ಮನಸ್ಸು ಹೂವು ಹಾಗೂ ಕಲ್ಲಿನ ಹಾಗೆ ಇರುತ್ತದೆ. ಏಕೆಂದರೆ ಕಲ್ಲಿಗೆ ಯಾವುದೇ ಆಕಾರವಿರದು. ಆದರೆ ಶಿಲ್ಪಿ ಆ ಕಲ್ಲನ್ನು ಒಂದು ಸುಂದರ ಮೂರ್ತಿಯಾಗಿ ರೂಪಿಸುತ್ತಾನೆ. ಅದರಂತೆ ನಾವೂ ಮಕ್ಕಳನ್ನು ಭವಿಷ್ಯದ ಒಬ್ಬ ಒಳ್ಳೆಯ ನಾಗರಿಕನಾಗಿ ರೂಪಿಸುವಲ್ಲಿ ಪ್ರಯತ್ನಿಸಬೇಕೆಂದು ಹುರಿದುಂಬಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎಸ್. ಇಟಕಂಪಳ್ಳಿ ಆಯೋಜಿಸಿದರು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಹಾರ್ದ ನಿರ್ದೇಶಕ ಸುಬ್ರಮಣ್ಯಂ ಪ್ರಭು ಪಾಲ್ಗೊಂಡಿದ್ದರು. ಬಸವರಾಜ ವರವಟ್ಟಿ, ಸ್ವಾಮಿದಾಸ ಬೇದ್ರೆ, ಪ್ರಶಾಂತ ಬಿರಾದಾರ ಸರಸ್ವತಿ, ಸಂಗಪ್ಪ ಚನ್ನಶೆಟ್ಟಿ, ಸುಧಾಕರ ಎಲ್ಲಾನೋರ, ಖಾಜಾಬಿ, ಸಂತೋಷ ಗುತ್ತಿ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement