ವಿಜ್ಞಾನ ಪರಿಷತ್ ಬೀದರ್ ಜಿಲ್ಲಾ ಸಮಿತಿಗೆ ಆಯ್ಕೆ
ಬೀದರ್: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ಬೀದರ್ ಜಿಲ್ಲಾ ಸಮಿತಿಗೆ ನ. 17ರಂದು ಚುನಾವಣೆ ನಡೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಗರದ ಲಕ್ಷೀಬಾಯಿ ಕಮಠಾಣೆ ಕನ್ಯಾ ಪ್ರೌಢಶಾಲೆಯಲ್ಲಿ ಭಾನುವಾರ ಜರುಗಿದ ಚುನಾವಣೆಯಲ್ಲಿ ಬಸವಕುಮಾರ ಪಾಟೀಲ್- ಗೌರವಾಧ್ಯಕ್ಷರು, ಪ್ರಕಾಶ ಲಕಶೆಟ್ಟಿ- ಅಧ್ಯಕ್ಷರು, ಕಲ್ಪನಾ ಬಿರಾದಾರ ಹಾಗೂ ವಿರೂಪಾಕ್ಷ ಗಾದಗಿ- ಉಪಾಧ್ಯಕ್ಷರು, ಮಹಾರುದ್ರಪ್ಪ ಅಣದೂರೆ- ಪ್ರಧಾನ ಕಾರ್ಯದರ್ಶಿ, ಕಲ್ಯಾಣರಾವ್ ಚಳಕಾಪೂರೆ- ಸಹ-ಕಾರ್ಯದರ್ಶಿ, ಸುಭಾಷ ಗಂಗಾ- ಖಜಾಂಚಿ ಅಲ್ಲದೇ ಸುರೇಶ ಅಕ್ಕಣ್ಣ, ಪಂಕಜ ಮುಸ್ತರೆ, ಆರ್. ಎಸ್. ಭೂರೆ, ಹಾಗೂ ಸತೀಷ ಕುಮಾರ ಚಾಲಕ ಅವರು ಸಮಿತಿ ಸದ್ಯಸ್ಯರನ್ನಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿ ಚುನಾವಣೆಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಖಜಾಂಚಿ ಗಿರಿಶ ಕಡ್ಲೆವಾಡ ವೀಕ್ಷಕರಾಗಿ ಭಾಗವಹಿಸಿದರು. ಡಾ.ಸಿ.ಎಸ್. ಪಾಟೀಲ್ ಸಭೆಯ ಅಧ್ಯಕ್ಷತೆ ವಹಿಸಿದರು. ಪಂಡಿತ ಬಾಳೂರೆ ಉಪಸ್ಥತರಿದ್ದರು. ಜಿಲ್ಲೆಯ ವಿಜ್ಲಾನ ಪರಿಷತ್ತಿನ 150 ಸದಸ್ಯರು ಭಾಗವಹಿಸಿದರು.
ಭಾನುವಾರ ನಡೆದ ಸಭೆಯಲ್ಲಿ ಪ್ರಮುಖರಾದ ಪ್ರೊ. ದೇವೆಂದ್ರ ಕಮಲ, ವೈಜಿನಾಥ ಕಮಠಾಣೆ, ಎಸ್.ಬಿ.ಬಿರಾದಾರ, ವೆಂಕಟರೆಡ್ಡಿ ಕೋಪಗಿರ, ಸುರೇಶ ಚನ್ನಶೆಟ್ಟಿ, ಕಾಂತವೀರ ಬಾಳೂರ, ದಾನಿ ಬಾಬುರಾವ್, ಡಾ.ಸಿ. ಆನಂದರಾವ, ಡಾ. ಮಂಡಿ, ಡಾ. ನಾಗೂರೆ ಮತ್ತಿತರರು ಉಪಸ್ಥಿರಿದ್ದರು.