ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಕ್ಷಿಪ್ತ ಸುದ್ದಿ

Mainashree
Updated On : 18 Nov 2013, 11:19 am

ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ
ಬೀದರ್:  ಹುಮನಾಬಾದ್‌ನಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಮುಸ್ಲಿಂ ಸಮುದಾಯದ ವಿವಿಧ ಸಮಸ್ಯೆಗಳ ಕುರಿತು ಹಾಗೂ ಪಟ್ಟಣದ 43 ಮುಸ್ಲಿಂ ಸಮುದಾಯದ ಅಮಾಯಕರ ವಿರುದ್ಧ ಜಾಮೀನು ರಹಿತ ಮೊಕದ್ದಮೆ ಹೂಡುವಂತೆ ಪೊಲೀಸರಿಗೆ ಸೂಚನೆ ನೀಡಿದ ಶಾಸಕ ರಾಜಶೇಖರ ಪಾಟೀಲ್ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಜೆಡಿಎಸ್ ಆಗ್ರಹಿಸಿದೆ. ಈ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ನಸಿಮೋದ್ದಿನ್ ಪಟೇಲ್ ತಿಳಿಸಿದ್ದು, ಸೆ.24ರಂದು ಪರವಾನಿಗೆ ಇಲ್ಲದೇ ಹಾಗೂ ಮುನ್ಸೂಚನೆ ಇಲ್ಲದೇ ಕಾನೂನುಬಾಹಿರವಾಗಿ ಹುಮನಾಬಾದ್ ಬಂದ್‌ಗೆ ಕರೆ ನೀಡಿ ಹಿಂದೂ-ಮುಸ್ಲಿಂರ ಮಧ್ಯೆ ಕೋಮುಭಾವನೆ ಕೆರಳಿಸಿದ್ದಾರೆ. ಮುಸ್ಲಿಂ ಸಮುದಾಯದ ವಿರುದ್ಧ ಕೆಟ್ಟ ಶಬ್ಧ ಬಳಕೆ ಮಾಡಿದ ಕ್ರಮವನ್ನು ಹ್ಯೂಮನ್ ರೈಟ್ಸ್ ಅಸೋಶಿಯೇಶನ್ ಖಂಡಿಸಿದೆ ಎಂದಿದ್ದಾರೆ ಎಂದು ನಸೀಮೊದ್ದಿನ್ ಪಟೇಲ್ ತಿಳಿಸಿದ್ದಾರೆ.
ಕನಕ ಯುವ ಸೇನೆ ಪದಾಧಿಕಾರಿಗಳು
ಬೀದರ್:  ಕರ್ನಾಟಕ ಕನಕ ಯುವ ಸೇನೆ ಪದಾಧಿಕಾರಿಗಳ ಸಭೆ ಇತ್ತೀಚೆಗೆ ರಮೇಶ ಬಿರಾದಾರ ನೇತೃತ್ವದಲ್ಲಿ ನಡೆದು ಬೀದರ್ ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸುನೀಲ್ ಬಸಂತಪುರೆ ಅಧ್ಯಕ್ಷ, ಶ್ರೀನಿವಾಸ ರಾವತೀರ್ಥ ಗೌರವಾಧ್ಯಕ್ಷ, ಸುನೀಲ ಕಳಗೊಂಡ ಹಾಗೂ ದೀಪಕ ಚಿದ್ರಿ ಉಪಾಧ್ಯಕ್ಷರು, ಸುನೀಲ ಫತ್ತೆಪುರೆ ಪ್ರಧಾನ ಕಾರ್ಯದರ್ಶಿ, ಮಾರುತಿ ಹಲಬರ್ಗೆ ಕಾರ್ಯದರ್ಶಿ, ಉದಯಸಿಂಗ್ ಮಲ್ಕಾಪುರೆ ಸಹ ಕಾರ್ಯದರ್ಶಿ, ಉಮೇಶ ಕಾಳಗೊಂಡ ಖಜಾಂಚಿ, ವಿಜಯಕುಮಾರ, ರಾಜಕುಮಾರ, ದತ್ತುರಾವ್, ರಾಜಕುಮಾರರನ್ನು ಸದಸ್ಯರಾಗಿ ನೇಮಕ ಮಾಡಲಾಯಿತು.
ಜಾನುವಾರು ಸಾವು: ಪರಿಹಾರಕ್ಕೆ ಆಗ್ರಹ
ಬೀದರ್:  ಕಾಲು-ಬಾಯಿ ಜ್ವರಕ್ಕೆ ತುತ್ತಾಗಿ ಸಾವನಪ್ಪಿದ ಜಾನುವಾರುಗಳ ಮಾಲೀಕರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕೆಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ. ಈ ಕುರಿತು ರಾಜ್ಯದ ಪಶು ಸಂಗೋಪನಾ ಸಚಿವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಕೌಠಾ, ಕಾರ್ಯದರ್ಶಿ ಪ್ರಭುರಾವ್ ಪಾಟೀಲ್, ಜಾನುವಾರುಗಳು ಸಾವನಪ್ಪಿದ್ದರಿಂದ ರೈತರಿಗೆ ತುಂಬ ನಷ್ಟವಾಗಿ ಪರಿಣಮಿಸಿದರಿಂದ ಸರ್ಕಾರ ರೈತರಿಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದಿದ್ದಾರೆ.
ಸಂಘಟನಾತ್ಮಕ
ಕಾರ್ಯಕ್ರಮ 21ರಂದು
ಬೀದರ್:  ದಸಂಸ ನ.21ರಂದು ಹುಮನಾಬಾದ್ ಪಟ್ಟಣದ ತಹಸೀಲ ಕಚೇರಿ ಎದುರು ಪಕ್ಷಾತೀತ ಮತ್ತು ಸಂಘಟನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಭೋಸ್ಲೆ ತಿಳಿಸಿದ್ದಾರೆ.
ದುರಸ್ತಿ ಕಾರ್ಯಾಗಾರ
ಬೀದರ್:  ನಗರದ ವಿಸ್ತೀರ್ಣ ಕೇಂದ್ರಗಳಾದ ಮಂಗಲಪೇಟ್, ಕಮಠಾಣಾ ಕೇಂದ್ರದಲ್ಲಿ ಹೊಲಿಗೆ ಯಂತ್ರಗಳ ಉಚಿತ ದುರಸ್ತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. 60ಕ್ಕೂ ಹೆಚ್ಚು ಫಲಾನುಭವಿಗಳು ತರಬೇತಿಯ ಲಾಭ ಪಡೆದರು.
'ಮನಃಶುದ್ಧಿಗಾಗಿ ಧಾರ್ಮಿಕ ಚಿಂತನೆ'
ಹುಮನಾಬಾದ್: ಧಾರ್ಮಿಕ ಚಿಂತನೆಯಿಂದ ಮನಶುದ್ಧಿಯಾಗುತ್ತದೆ. ಅಲ್ಲದೆ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ ಎಂದು ಬೀದರ್ ಜ್ಞಾನಯೋಗಾಶ್ರವುದ ಡಾ. ರಾಜಶೇಖರ ಸ್ವಾಮಿ ಗೊರ್ಟಾ ತಿಳಿಸಿದರು.
ತಾಲೂಕಿನ ಮನ್ನಾಏಖೇಳ್ಳಿ ಸಮೀಪದ ರೇಕುಳಗಿಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂತರು ಮಹಾತ್ಮರು ಮಾನವ ಕಲ್ಯಾಣಕ್ಕಾಗಿ ಹಲವು ಸಂದೇಶಗಳನ್ನು ನೀಡಿದ್ದಾರೆ ಎಂದರು. ಕಾರ್ತಿಕ ಹುಣ್ಣಿಮೆಯು ಪವಿತ್ರವಾದ ದಿನವಾಗಿದ್ದು, ವಿವಿಧ ಮಹಾತ್ಮರು ದೇವರನ್ನು ಆರಾಧಿಸಿ ದೇವರ ದರ್ಶನ ಪಡೆದು ಇಷ್ಟಾರ್ಥವನ್ನು ಸಾಧನೆ ಮಾಡಿದ ದಿನ ಎಂದರು. ದೇವಸ್ಥಾನದಲ್ಲಿ ಪೂಜೆ, ಆರತಿ, ಭಜನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು. ಮಂತ್ರ ಮಹರ್ಷಿ ಎನ್.ಬಿ.ರೆಡ್ಡಿ ಗೂರುಜಿ, ದೇವಸ್ಥಾನ ಸಮಿತಿ ಅಧ್ಯಕ್ಷ ಸಂಗಪ್ಪ ಪಾಟೀಲ್, ವೈಜಿನಾಥ ಹಚ್ಚೆ, ಬಸವರಾಜ ಬೋರಾಳೆ, ರೇವಣಪ್ಪ ಬಗದಲ್, ಬಾಬುರಾವ್ ಪಾಟೀಲ್ ಇದ್ದರು.
ಗ್ರಾಪಂನಲ್ಲಿ ಕಳವು
ಹುಮನಾಬಾದ್: ಗ್ರಾಪಂ ಕಚೇರಿ ಬೀಗ ಮುರಿದು, ಕಂಪ್ಯೂಟರ್‌ನ ಕೆಲ ಉಪಕರಣಗಳು ಕಳವು ಮಾಡಿರುವ ಘಟನೆ  ಚಾಂಗಲೇರಾ ಗ್ರಾಮದಲ್ಲಿ ನಡೆದಿದೆ.
 ಕಚೇರಿಯಲ್ಲಿದ್ದ ಎರಡು ಬಯೋವುಟ್ರಿಕ್ಸ್, ಎರಡು ಪ್ರೀಂಟರ್ ಹಾಗೂ ಒಂದು ಐ ಸ್ಕ್ಯಾನರ್ (ಐರಿಶ್) ಉಪಕರಣ  ಕಳವು ಮಾಡಲಾಗಿದೆ. ಸ್ಥಳಕ್ಕೆ ಸಿಪಿಐ ಶಿವಾನಂದ ಪವಾಡಶೆಟ್ಟಿ ಹಾಗೂ ಪಿಎಸ್‌ಐ ಸುರೇಶ ಭಾವಿಮನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಪಿಡಿಒ ದೂರಿನ ಮೇರೆಗೆ ಬೇಮಳಖೇಡಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement