ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಕ್ಷಿಪ್ತ ಸುದ್ದಿ

Mainashree
Updated On : 18 Nov 2013, 11:21 am

ಮುದಗಲ್: ಇಂದು ವೀರಭದ್ರೇಶ್ವರ ಜಾತ್ರೆ
ಮುದಗಲ್: ಪಟ್ಟಣದ ಹೊರವಲಯದಲ್ಲಿನ ಸಿದ್ದ ಪರ್ವತದಲ್ಲಿರುವ ಹಾಲಭಾವಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಸೋಮುವಾರ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ಸಿದ್ದಯ್ಯ ಸ್ವಾಮಿ ಸಾಲಿಮಠ ತಿಳಿಸಿದ್ದಾರೆ. ಸೋಮುವಾರ ಬೆಳಿಗ್ಗೆ ಸ್ಥಳಿಯ ಕುಂಬಾರಪೇಟೆಯಲ್ಲಿನ ಬಸವೇಶ್ವರ ದೇವಸ್ಥಾನದಿಂದ ಕುಂಭ ಮೆರವಣಿಗೆ, ಪಲ್ಲಕ್ಕಿ ಮೆರವಣಿಗೆ ಸೇರಿದಂತೆ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಪುರವಂತಿಕೆ ಸೇವೆ ಕೂಡ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬೌಲಿಂಗ್: ಅನುರಾಗ್ ಅತ್ಯುತ್ತಮ ಸಾಧನೆ
ರಾಯಚೂರು: ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಅಂತರ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಚೂರಿನ ಅನುರಾಗ್ ಅವರು ಏಳು ವಿಕೆಟ್ ಪಡೆದು ಅತ್ಯುತ್ತಮ ಬೌಲರ್ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಕೆಎಸ್‌ಸಿಎ ರಾಯಚೂರು ವಲಯದ ಪ್ರಕಟಣೆ ತಿಳಿಸಿದೆ. ನ.11 ರಿಂದ 13ರವರೆಗೆ ನಡೆದ ಕ್ರಿಕೆಟ್ ಪಂದ್ಯಾವಳಿಯ ಬೌಲಿಂಗ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮೆರೆದು ಅತ್ಯುತ್ತಮ ಬೌಲರ್ ಗೌರವ ಪಡೆದಿದ್ದಾರೆಂದು ತಿಳಿಸಿದೆ.
ಅಂಗವಿಕಲೆ ಮೇಲೆ ಅತ್ಯಾಚಾರ: ಖಂಡನೆ
ದೇವದುರ್ಗ: ಮಾನವಿ ತಾಲೂಕಿನ ಹಳ್ಳಿ ಹೊಸೂರು ಗ್ರಾಮದ ಅಂಗವಿಕಲ ಯುವತಿಯ ಮೇಲೆ ನಡೆದ ಅತ್ಯಾಚಾರ ಘಟನೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಲು ಅಂಗವಿಕಲರ ಒಕ್ಕೂಟ ನಿರ್ಧರಿಸಿದೆ. ಈಚೆಗೆ ಅಂಗವಿಕಲ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಗೇನಿ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಒಕ್ಕೂಟದಿಂದ ಆಯೋಜಿಸಿದ್ದ ಸಭೆಯಲ್ಲಿ ಈ ಕುರಿತು ಮಾತನಾಡಿ, ಅಂಗವಿಕಲ ಯುವತಿ ಮೇಲೆ ನಡೆದಿರುವ ಅತ್ಯಾಚಾರ ಖಂಡನೀಯ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಿಎಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಯುವತಿಗೆ ನ್ಯಾಯ ಹಾಗೂ ಸಾಮಾಜಿಕ ಭದ್ರತೆ ದೊರೆಯಬೇಕು. ಕಾಮುಕರ ಆಸ್ತಿ ಮುಟ್ಟುಗೋಲು ಹಾಕಿ, ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಈ ಹಿನ್ನೆಲೆಯಲ್ಲಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲು ಮುಂದಾಗುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಗಮ್ಮ ಮರಡ್ಡಿ, ಜಾಕೋಬ್ ಟೇಲರ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement