ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅನಾಗರಿಕ ಕಂದಾಚರಣೆ; ಮೌಢ್ಯ ಬಿತ್ತುವ ಯತ್ನ'

Rashmi Kasaragodu
Updated On : 19 Nov 2013, 12:18 pm

ದೇವದುರ್ಗ: ಪಟ್ಟಣದಲ್ಲಿ ಸಿದ್ದರಾಮೇಶ್ವರ ಜಾತ್ರೆ ಅಂಗವಾಗಿ ನ. 24ರಂದು ನಡೆಸಲುದ್ದೇಶಿಸಿರುವ ಉಜ್ಜಯಿನಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಅವಕಾಶ ನೀಡದಂತೆ ತಾಲೂಕಿನ ಪ್ರಗತಿ ಪರ ಸಂಘಟನೆಗಳು ಒತ್ತಾಯಿಸಿವೆ.
ಪಟ್ಟಣದಲ್ಲಿ ಸೋಮವಾರ ತಹಸೀಲ್ದಾರರಿಗೆ ಈ ಬಗ್ಗೆ ಮನವಿ ನೀಡಿ, ಮನುಷ್ಯನನ್ನು ಮನುಷ್ಯರು ಹೊರುವ ಅನಾಗರಿಕ ಮತ್ತು ಅಮಾನವೀಯ ಕಂದಾಚರಣೆ ಮುಖಾಂತರ ಸಮಾಜದಲ್ಲಿ ಮೌಢ್ಯ ಬಿತ್ತುವ ಪ್ರಯತ್ನವಿದಾಗಿದೆ. ಅಡ್ಡಪಲ್ಲಕ್ಕಿ ಮಹೋತ್ಸವದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ನ. 24ರಂದು ನಡೆಸಲುದ್ದೇಶಿಸಿರುವ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಅನುಮತಿಸದಂತೆ ಬಸವ ಕೇಂದ್ರದ ಅಧ್ಯಕ್ಷ ಪ್ರಕಾಶ ಪಾಟೀಲ್, ಕೃಷ್ಣಾ ನದಿ ತೀರ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಹೂವಿನಹೆಡ್ಗಿ, ದಸಂಸ ಮುಖಂಡ ಮರಿಲಿಂಗಪ್ಪ ಕೋಳೂರು, ಭಾರತೀಯ ವಿದ್ಯಾರ್ಥಿ ಒಕ್ಕೂಟದ ರಮೇಶ ರಾಮನಾಳ, ಸಿಐಟಿಯು ಘಟಕದ ಗಿರಿಯಪ್ಪ ಪೂಜಾರಿ, ಕರ್ನಾಟಕ ರೈತ ಸಂಘದ ಮಲ್ಲಯ್ಯ ಕಟ್ಟಿಮನಿ, ದಲಿತ ಸಾಹಿತ್ಯ ಪರಿಷತ್ನ ಬಸವರಾಜ ಬ್ಯಾಗವಾಟ್, ಪ್ರಗತಿಪರ ಮುಖಂಡರಾದ ರಾಘವೇಂದ್ರ ಕೋಲ್ಕಾರ, ಎನ್.ಲಿಂಗಪ್ಪ ಜಾಲಹಳ್ಳಿ, ಪುರಸಭೆ ಮಾಜಿ ಸದಸ್ಯ ಪ್ರಭು ಗದ್ಗಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement