ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಾಳೆ ಕನಕ ಜಯಂತಿ ಆಚರಣೆಗೆ ನಿರ್ಧಾರ

Rashmi Kasaragodu
Updated On : 19 Nov 2013, 12:22 pm

ಕನ್ನಡಪ್ರಭ ವಾರ್ತೆ  ಆಳಂದ  ನ.18
ತಾಲೂಕು ಆಡಳಿತದಿಂದ ನ.20 ರಂದು ಕನಕದಾಸರ ಜಯಂತಿ ಅದ್ಧೂರಿಯಾಗಿ ಆಚರಿಸಲು ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಮುಖ ರಸ್ತೆಗಳ ಮೂಲಕ ಭಾವಚಿತ್ರದ ಭವ್ಯ ಮೆರವಣಿಗೆ, ಡೊಳ್ಳು ಕುಣಿತ, ಬಹಿರಂಗ ಸಭೆ, ಉಪನ್ಯಾಸ ಸೇರಿದಂತೆ ಪ್ರಮುಖ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ಠರಾವು ಮಾಡಲಾಯಿತು.
ತಹಸೀಲ್ದಾರರು ಮಾತನಾಡಿ, ಸಮಾರಂಭಕ್ಕೆ ಪುರಸಭೆ ಸೇರಿ ಎಲ್ಲ ಸರ್ಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪದೆ ಹಾಜರಾಗಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಸಲಹೆ ನೀಡಿದರು.
ಅಧಿಕಾರಿಗಳ ಗೈರಿಗೆ ಕ್ರಮ: ಸಭೆಯಲ್ಲಿ ಬಸವ ಕೇಂದ್ರದ ಅಧ್ಯಕ್ಷ ಶ್ರೀಮಂತ ಕಾರಬಾರಿ ಮಾತನಾಡಿ, ರಾಜ್ಯೋತ್ಸವ ಸೇರಿ ಅನೇಕ ಸರ್ಕಾರ ಹಮ್ಮಿಕೊಳ್ಳುವ ಜಯಂತಿ ಸಮಾರಂಭದ ಪೂರ್ವಭಾವಿ ಸಭೆ ಹಾಗೂ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಗೈರಾಗಿ ತಮ್ಮ ಕಚೇರಿ ಸಿಬ್ಬಂದಿಗೆ ಕಳುಹಿಸಿಕೊಟ್ಟು ಕಾರ್ಯಕ್ರಮಕ್ಕೆ ಅವಮಾನಿಸುತ್ತಿದ್ದಾರೆ. ಗೈರಾಗುವ ಅಧಿಕಾರಿ ಮತ್ತು ಸಿಬ್ಬಂದಿ ನೋಟಿಸ್ ಕಳುಹಿಸಿ ಕ್ರಮ ಜರುಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರಿಗೆ ಅಮಂತ್ರಿಸಬೇಕು ಎಂದು ಒತ್ತಾಯಿಸಿದರು.
ಹಾಜರಿದ್ದ ತಾಪಂ ಯೋಜನಾಧಿಕಾರಿ ಗುರುನಾಥ ಗೌಡಪ್ಪನವರ್, ಸಮಾಜ ಕಲ್ಯಾಣಾಧಿಕಾರಿ ಕಮಲಾಬಾಯಿ ತಮ್ಮನ್, ಸಹಾಯಕ ಸಿಡಿಪಿಒ ಮಹಾದೇವಿ ಷಣ್ಮೂಖ, ಭೂ ನೋಂದಣಿ ಅಧಿಕಾರಿ ಅನುರಾದಾ ಕಿನ್ನಾಳ ಮಾತನಾಡಿದರು.
ಮುಖಂಡ ಜೆ.ಕೆ. ಪೂಜಾರಿ, ಉಪನ್ಯಾಸಕ ಬಾಬುರಾವ ಸರಡಗಿ, ಕೆ.ಎಸ್. ಸಾವಳಗಿ, ಮಲ್ಲಿನಾಥ ಘೋಡಕೆ, ದಯಾನಂದ ಶೇರಿಕಾರ, ಬಿಎಸ್ಪಿ ಅಧ್ಯಕ್ಷ ಶಶಿಕಾಂತ ನಿರಗುಡಿ, ಶಶಾಂಕ ಶಹಾ, ಅಬ್ದುಲ್ ವಾಹಬ್, ಹಣಮಂತ ಮೇಲಕೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement