371(ಜೆ) ಕಲಂ ಜಾರಿಯಿಂದ ಶೈಕ್ಷಣಿಕ ಅಭಿವೃದ್ಧಿ
ಸಿಂಧನೂರು: ಸಂವಿಧಾನದ 371(ಜೆ)ನೇ ಕಲಂ ಜಾರಿಯಿಂದ ಹೈದ್ರಾಬಾದ್ ಕರ್ನಾಟಕ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲಿದೆ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳದರು.
ತಾಲೂಕಿನ ಉಪ್ಪಲದೊಡ್ಡಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಎಸ್ಎ ಯೋಜನೆಯಡಿ ನಿರ್ಮಾಣವಾದ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳನ್ನು ನಿರ್ಮಾಣ ಮಾಡಿ ಸಮಸ್ಯೆ ಹೋಗಲಾಡಿಸಲಾಗಿದೆ. ಮೂಲ ಸೌಲಭ್ಯಕ್ಕೂ ಆದ್ಯತೆ ನೀಡಲಾಗಿದೆ. ಅಚ್ಚುಕಟ್ಟಾಗಿ ನಿರ್ಮಿಸಿರುವ ಕಟ್ಟಡದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಗತಿಯಲ್ಲಿ ಕಟ್ಟಡ ಕಾಮಗಾರಿ: ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ ಮಾತನಾಡಿ, ಶಾಲೆಯಲ್ಲಿ ಎಲ್ಲ ಸೌಕರ್ಯ ಒದಗಿಸಿದ್ದು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು, ಜ್ಞಾನಾರ್ಜನೆ ವೃದ್ಧಿಗೊಳಿಸಲು ಶ್ರಮಿಸಬೇಕು. ತಾಲೂಕಿನಲ್ಲಿ ಎಸ್ಎಸ್ಎ ಯೋಜನೆ ಅಡಿಯ ಕಟ್ಟಡಗಳು ಪ್ರಗತಿಯಲ್ಲಿವೆ. ಇದರಿಂದ ಈ ಹಿಂದೆ ಇದ್ದ ಕೊಠಡಿಗಳ ಸಮಸ್ಯೆ ನಿವಾರಣೆಯಾಗಿದೆಂದು ತಿಳಿಸಿದರು.
ಬಸವರಾಜಸ್ವಾಮಿ ಹಸಮಕಲ್, ಗೌಡಪ್ಪಗೌಡ ಗುಂಜಳ್ಳಿ, ಅಮರೇಶ ಗಚ್ಚಿನಮನಿ, ಶಂಕ್ರಪ್ಪ ಪತ್ತಾರ, ಬಸನಗೌಡ ರತ್ನಾಪುರ, ಹನುಮಂತಪ್ಪ ಮುದ್ದಾಪುರ, ಶರಣೇಗೌಡ ಮಾಲಿಪಾಟೀಲ್, ಬಸವರಾಜ ಕುರುಕುಂದ, ಬಸವರಾಜ ಪಗಡದಿನ್ನಿ, ರಾದ ಹಿರೇಬಸವಲಿಂಗಪ್ಪ, ವೀರನಗೌಡ ಮಾಲಿಪಾಟೀಲ್, ಕರಿಯಪ್ಪ ಮಡಿವಾಳ, ಗವಿಸಿದ್ದಪ್ಪ ನೇಗಲಿ, ಹೊಸಗೇರಪ್ಪ ಕರಡೋಣಿ, ಉಪಾಧ್ಯಕ್ಷ ಶೇಖರಗೌಡ ಪೊಲೀಸ್ಪಾಟೀಲ್, ಮಲ್ಲನಗೌಡ ಮಾ.ಪಾ., ಪ್ರತಾಪಗೌಡ ಚೇತನ ಪಾಟೀಲ್, ಚಿದಾನಂದಪ್ಪ ನಾಯಕ ಕಾನಿಹಾಳ, ಶಿಕ್ಷಕರಾದ ಗಂಗಾಧರ ಆರ್.ಕೆ., ಪುಷ್ಪಾಲತಾ ಬಿ.ಆರ್., ವೆಂಕೋಬ, ಕೊಟ್ರೇಶ, ಸುರೇಶ ಉಪಸ್ಥಿತರಿದ್ದರು. ಕವಿತಾ ಪ್ರಾರ್ಥಿಸಿದರು. ಪ್ರಾಸ್ತಾವಿಕವಾಗಿ ಶಿಕ್ಷಕ ಕುಮಾರ ಎಚ್. ಮಾತನಾಡಿದರು. ಮುಖ್ಯಶಿಕ್ಷಕ ಮಲ್ಲಪ್ಪ ಗೋನ್ವಾರ ಸ್ವಾಗತಿಸಿದರು. ರಂಗಪ್ಪ ಲಮಾಣಿ ನಿರೂಪಿಸಿದರು.