ಗುಂಡಸಾಗರ ಶಾಲೆ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳ ವಿತರಣೆ
ಮುದಗಲ್: ಸಮೀಪದ ಗುಂಡಸಾಗರ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಕಾಚಾಪೂರ ಗ್ರಾಪಂ ಅದ್ಯಕ್ಷೆ ನಾಗಮ್ಮ ಉದ್ಘಾಟಿಸಿದರು.
ಪಂ. ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಮಾಲಾರ್ಪಾಣೆ ಮಾಡಲಾಯಿತು. ಕಾರ್ಯಕ್ರಮವನ್ನು ರೂವಾರಿ ಸಂಸ್ಥೆ ರಾಯಚೂರು ಹಾಗೂ ತಾಲೂಕಿನ ಆಯ್ದ ಪಂಚಾಯಿತಿಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ನಡೆಸಲಾಯಿತು. ರೂವಾರಿ ಸಂಸ್ಥೆಯ ಶಿವರಾಮರೆಡ್ಡಿ ಅವರು ಸಂಸ್ಥೆ ನಡೆದುಬಂದ ದಾರಿಯ ಕುರಿತು ಮಕ್ಕಳ ಆರೋಗ್ಯ, ನೈರ್ಮಲ್ಯ, ಶಿಕ್ಷಣ, ಅಪೌಷ್ಟಿಕತೆ ಸೇರಿದಂತೆ ನಾನಾ ವಿಷಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತಾನಾಡಿದರು.
ನಾನಾ ಶಾಲೆಗಳಲ್ಲಿ ಶಿಕ್ಷಣ ಕಲಿಯುತ್ತಿರುವ ದಲಿತ, ಬಡ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳನ್ನು ದಾನಿಗಳ ನೆರವಿನಿಂದ ವಿತರಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಪಿಡಿಒ ಮಂಜುನಾಥ, ಎಸ್‌ಡಿಎಂಸಿ ಅಧ್ಯಕ್ಷ ಗೂಡುಸಾಬ, ಗ್ರಾಪಂ ಸದಸ್ಯರಾದ ಶಂಕ್ರಪ್ಪ, ಗುರನಗೌಡ, ವಿಜಯಲಕ್ಷೀ, ಶಾಲಾ ಮು.ಗು ಶರಣಪ್ಪ ಮೇಟಿ, ಸಂಸ್ಥೆಯ ತಾರಾಕೇಶ್ವರಿ, ಬಸವರಾಜ, ಶಿವಾನಂದ ಇದ್ದರು.