ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಗರ ಸಮಗ್ರ ಅಭಿವೃದ್ಧಿಗೆ 30 ಕೋಟಿ: ಶಾಸಕ

Mainashree
Updated On : 20 Nov 2013, 10:49 am

ಸಿಂಧನೂರು: ನಗರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಣ್ಣ ಮತ್ತು ದೊಡ್ಡ ಪಟ್ಟಣಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆ (ಯುಐಡಿಎಸ್‌ಎಂಟಿ)ಯಡಿ 30 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಯುಐಡಿಎಸ್‌ಎಂಟಿ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಖಾಸಗಿ ತಾಂತ್ರಿಕ ಇನ್ಫ್ರಾಸಪೋರ್ಟ್ ಕಂಪನಿಯಿಂದ ನಗರದ ಎಲ್ಲ ವಾರ್ಡ್ ಗಳಲ್ಲಿ ಗುಣಮಟ್ಟದ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳ ಸರ್ವೆ ಮಾಡಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇನ್ನೂ ಎಂಎಸ್‌ಡಿಪಿ ಯೋಜನೆಯಡಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 15 ಕೋಟಿ ಬಿಡುಗಡೆಯಾಗಿದೆ ಎಂದರು.
ಸರ್ಕಾರಕ್ಕೆ ಪ್ರಸ್ತಾವನೆ: ಅಲ್ಪಸಂಖ್ಯಾತರ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 87 ಲಕ್ಷ, ಶಾಲಾ ಕಟ್ಟಡ ನಿರ್ಮಾಣಕ್ಕೆ 184 ಲಕ್ಷ, ವಸತಿ ನಿಲಯದ ಕಟ್ಟಡಕ್ಕೆ 176 ಲಕ್ಷ, ಕಾಲೇಜು ಕಟ್ಟಡಕ್ಕೆ 81.96 ಲಕ್ಷ, ಸಮುದಾಯ ಗ್ರಂಥಾಲಯ ಕಟ್ಟಡಕ್ಕೆ 38.78 ಲಕ್ಷ, ಚರಂಡಿ ನಿರ್ಮಾಣಕ್ಕೆ 70.84 ಲಕ್ಷ, ಸ್ವಯಂ ಉದ್ಯೋಗ ಕಾರ್ಯಕ್ರಮಕ್ಕೆ 154 ಲಕ್ಷ, ಅಲ್ಪಸಂಖ್ಯಾತರ ಪಕ್ಕಾ ಮನೆ ನಿರ್ಮಾಣಕ್ಕೆ 4 ಕೋಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ 2 ಕೋಟಿ, ಐಟಿಐ, ಡಿಪ್ಲೋಮಾ, ಡಿಇಡಿ ಕಟ್ಟಡ ನಿರ್ಮಾಣಕ್ಕೆ ಹಣ ನಿಗದಿಗೊಳಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದರು. ಶಾಸಕರ ಅನುದಾನದಲ್ಲಿ 10 ಲಕ್ಷ ವಿಕಲಚೇತನರ ಅಭಿವೃದ್ಧಿಗೆ ಮೀಸಲಿಡಲಾಗಿದೆ. ತ್ರಿಚಕ್ರ ವಾಹನ, ಕೃತಕ ಕಾಲು ಜೋಡಣೆ, ಶ್ರವಣದೋಷ, ಸಂಪೂರ್ಣ ಅಂಧರು, ಮುಖವಿಕಲಚೇತನರಿಗೆ ಸಲಕರಣೆಗಳನ್ನು ನೀಡಲು ಅವಕಾಶವಿದ್ದು, ತಾಲೂಕಿನ ವಿಕಲಚೇತನರು ನಮ್ಮ ಕಾರ್ಯಾಲಯದಲ್ಲಿಯೇ ಅರ್ಜಿ ಸಿಗುತ್ತಿದ್ದು, ಅರ್ಜಿಯೊಂದಿಗೆ ಇತರ ದಾಖಲೆಗಳನ್ನು ಒದಗಿಸಿ ಸೌಲಭ್ಯ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.
ನಾಳೆಯಿಂದ ಕಾಮಗಾರಿ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಎಲ್ಲ ವಾರ್ಡ್‌ಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. 20 ವಾರ್ಡ್‌ಗಳಲ್ಲಿ 2.76 ಕೋಟಿ ವೆಚ್ಚದಲ್ಲಿ ರಸ್ತೆ ಮೆಟಲಿಂಗ್ ಕಾಮಗಾರಿಯನ್ನು ನಾಳೆಯಿಂದಲೇ ಪ್ರಾರಂಭಿಸಲಾಗುವುದು ೆಎಂದು ತಿಳಿಸಿದರು.
ಈ ವೇಳೆ ನಗರಸಭಾಧ್ಯಕ್ಷ ಜಾಫರ ಅಲಿ ಜಾಹಗೀರದಾರ, ಕಾಂಗ್ರೆಸ್ ಮುಖಂಡ ಲಿಂಗರಾಜ ಪಾಟೀಲ್, ನಗರಸಭಾ ಸದಸ್ಯರಾದ ನಬೀಸಾಬ್, ವೆಂಕಟೇಶ, ಶಫಿಯುದ್ದೀನ್, ಟಿಎಪಿಸಿಎಂಎಸ್‌ನ ನಿರ್ದೇಶಕ ಸಂಜಯ್ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನಗೌಡ ಗುಂಜಳ್ಳಿ, ಮುರ್ತುಜಾ, ಅಲ್ಲಮಪ್ರಭು, ಎಸ್.ಶರಣೇಗೌಡ, ಖಾಜಿ ಮಲ್ಲಿಕ್, ಎನ್.ಅಮರೇಶ, ಅಲ್ಲಮಪ್ರಭು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement