ಒಲಂಪಿಯಾಡ್: ರಾಜ್ಯಮಟ್ಟಕ್ಕೆ
ಸಿಂಧನೂರು: ಈಚೆಗೆ ನಡೆದ ಜಿಲ್ಲಾ ಮಟ್ಟದ ಒಲಂಪಿಯಾಡ್ ಪರೀಕ್ಷೆಯಲ್ಲಿ ತಾಲೂಕಿನ ಸೋಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅಂಬಿಕಾ ತಂದೆ ಬಸವನಗೌಡ ಕೊಟ್ನೇಕಲ್ 6ನೇ ರ್ಯಾಂಕ್ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ರಾಜ್ಯಮಟ್ಟದಲ್ಲೂ ತನ್ನ ಪ್ರತಿಭೆಯನ್ನು ಮೆರೆದು ಸಿಂಧನೂರಿನ ಕೀರ್ತಿ ಹೆಚ್ಚಿಸುವಂತೆ ಶಾಲೆಯ ಶಿಕ್ಷಕ ವೃಂದ, ಶಿಕ್ಷಣ ಇಲಾಖೆ ಈಕೆಗೆ ಶುಭ ಹಾರೈಸಿದೆ.