ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ
ಸಿಂಧನೂರು: ನಗರದ ಇಂದಿರಾ ಕಾಲೊನಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಜಾಫರ್ ಜಾಗೀರದಾರ ಚಾಲನೆ ನೀಡಿದರು. ರಾಜ್ಯ ಹಣಕಾಸು ಯೋಜನೆಯಡಿಯಲ್ಲಿ 500 ಅಡಿ ಸಿಸಿ ರಸ್ತೆ, 200 ಫೀಟ್ ಪೈಪ್ಲೈನ್ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದೊಂದು ರಸ್ತೆಗೆ ಸಿಸಿ ಮಾಡಿದರೆ ಇಂದಿರಾ ಕಾಲೊನಿಯ ಬಹುತೇಕ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾದಂತೆ ಎಂದು ವಿವರಿಸಿದರು. ನಗರಸಭೆ ಸದಸ್ಯರಾದ ಬಸವರಾಜ ನಾಡಗೌಡ, ಸಣ್ಣವೀರಭದ್ರಪ್ಪ ಕುರುಕುಂದಿ, ಶರಣಯ್ಯಸ್ವಾಮಿ, ವೆಂಕಟೇಶ ಬಂಡಿ ವಕೀಲ, ಮುಖಂಡರಾದ ಸಿದ್ರಾಮೇಶ, ನನ್ನುಸಾಬ ಭಾಗವಹಿಸಿದ್ದರು.
--