ನಾಳೆ ಸಿದ್ದಯ್ಯ ತಾತನವರ ಆರಾಧನಾ ಮಹೋತ್ಸವ
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಸಿದ್ಧಿಪುರುಷ ಸಿದ್ದಯ್ಯ ತಾತನವರ ಆರಾಧನೆಯ ಮಹೋತ್ಸವವನ್ನು ನ.22ರಂದು ಆಯೋಜಿಸಲಾಗಿದೆ. ಶ್ರೀ ಗುರುಚನ್ನವೀರ ಶಿವಾಚಾರ್ಯರು ಚಿಕ್ಕಮಠ ಅವರ ಆಶೀರ್ವಾದದಿಂದ ಆರಾಧನೆ ಮಹೋತ್ಸವವನ್ನು ಆಯೋಜಿಸಿದ್ದು, ನ.21ರಂದು ಸಂಜೆ 7ರಿಂದ ಸಿಂಧನೂರಿನ ಶ್ರೀಶೈಲ ಪತ್ತಾರ್ ಅವರಿಂದ ರುದ್ರಾಕ್ಷಿ, ವಿಭೂತಿ ಮಹತ್ವದ ಕುರಿತು ಉಪನ್ಯಾಸ ಆಯೋಜಿಸಲಾಗಿದೆ.
ನ. 22ರಂದು ಬೆಳಗ್ಗೆ 6ಕ್ಕೆ ಶ್ರೀಸಿದ್ದಯ್ಯ ತಾತನವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಲಿದೆ.
ಬೆ.10ಕ್ಕೆ ಚಿಕ್ಕಮಠದ ನಿವಾಸದಿಂದ ಲಿಂ.ಸಿದ್ದಯ್ಯತಾತನವರ ಪಂಚಲೋಹದ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ನ.22ರಿಂದ ನ.26ರವರೆಗೆ ದಿನವೂ ಭಜನಾ ಕಾರ್ಯಕ್ರಮ ನಡೆಯಲಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಚಿಕ್ಕಮಠದ ಸಿದ್ದಯ್ಯತಾತ ಮತ್ತು ಸಹೋದರರು ಮನವಿ ಮಾಡಿದ್ದಾರೆ.