ಸ್ವಚ್ಛತಾ ಉತ್ಸವ ಯಶಸ್ವಿ
ರಾಯಚೂರು: ಸವಿನಯ ಸೇವಾ ಸಂಸ್ಥೆಯ ವತಿಯಿಂದ ನಿರ್ಮಲ ಭಾರತ ಯೋಜನೆಯಡಿ ಸ್ವಚ್ಛತಾ ಉತ್ಸವವನ್ನು ಇತ್ತೀಚೆಗೆ ಮಾನವಿ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಕಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಮಾದರಿಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಸಂಸ್ಥೆಯ ಕಾರ್ಯದರ್ಶಿ ವಿನಯ್ ಗಡ್ಡಿಮಠ ಮಾತನಾಡಿ, ಸಂಸ್ಥೆಯು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯ ಮೂಲಕ ಗ್ರಾಮೀಣ ಆರೋಗ್ಯ ಕಾಪಾಡುವ ಕಾರ್ಯ ಕೈಗೊಂಡು ಸಮಾಜದ ಪ್ರಗತಿಗೆ ಪೂರಕವಾಗಿ ಶ್ರಮಿಸುತ್ತಿದೆ ಎಂದರು.
--