ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸ್ವಯಂ ಜಾಗೃತಿಯಿಂದ ಜಲಮಾಲಿನ್ಯ ತಡೆ ಸಾಧ್ಯ

Lingaraj Badiger
Updated On : 21 Nov 2013, 11:05 am

ಸಿಂಧನೂರು: ಮಾನವನ ವಿವಿಧ ಚಟುವಟಿಕೆಗಳಿಂದಾಗಿ ನೈಸರ್ಗಿಕ ಸಂಪನ್ಮೂಲಗಳಾದ ನದಿ, ಸರೋವರ, ಸಮುದ್ರಗಳು ಮಲಿನಗೊಳ್ಳುತ್ತಿದ್ದು ಇದನ್ನು ನಿಯಂತ್ರಿಸಬೇಕಾದರೆ ನಾಗರಿಕರು ಮೊದಲು ಸ್ವಯಂ ಜಾಗೃತಗೊಳ್ಳಬೇಕು ಎಂದು ಶಿಕ್ಷಕ ಗುರುಬಸಪ್ಪ ಅಭಿಪ್ರಾಯಪಟ್ಟರು.
ನಗರದ ಜ್ಞಾನಜ್ಯೋತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಮೇಧಾ ಪಾಟ್ಕರ್ ಇಕೋ ಕ್ಲಬ್ ಅಡಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಲಮಾಲಿನ್ಯ ಹೀಗೆಯೇ ಮುಂದುವರಿದರೆ ಜಲಮೂಲಗಳೆಲ್ಲ ಮುಂದೊಂದು ದಿನ ಚರಂಡಿಗಳಂತಾಗುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ರಾಘವೇಂದ್ರ ಅವರು ಮಣ್ಣಿನ ಮಾಲಿನ್ಯ ಕುರಿತು ಮಾತನಾಡಿ, ಸಾವಯವ ಗೊಬ್ಬರ ಬಳಕೆ ಹಾಗೂ ಮಳೆ ನೀರು ಶೇಖರಿಸುವುದರಿಂದ ಮಣ್ಣಿನ ಸತ್ವ ಮತ್ತು ತೇವಾಂಶ ಉಳಿಸಬಹುದು ಎಂದರು. ಕಾಲೇಜು ಪ್ರಾಚಾರ್ಯ ವಿಷ್ಣುವರ್ಧನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಡಾ. ಬಸವರಾಜ ಪಿ.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement