ಅಕ್ರಮ ಸೀಮೆಎಣ್ಣೆ; 3 ಲಾರಿಗಳ ವಶ
ಸಿಂಧನೂರು: ನಗರದ ಎಪಿಎಂಸಿ ಗಂಜ್ ಗೇಟ್ ನಂ.1ರ ಬಳಿ ಅಕ್ರಮವಾಗಿ ಒಂದು ಟ್ಯಾಂಕರ್ನಿಂದ ಇನ್ನೊಂದು ಟ್ಯಾಂಕರ್ಗೆ ಅಕ್ರಮವಾಗಿ ಸೀಮೆಎಣ್ಣೆ ತುಂಬಿ ಸಾಗಣೆಗೆ ಯತ್ನಿಸುತ್ತಿದ್ದ ಮೂರು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬುಧವಾರ ಮಧ್ಯರಾತ್ರಿ ಪರವಾನಗಿ ಇಲ್ಲದೆ ಟ್ಯಾಂಕರ್ನಿಂದ ಜನರೇಟರ್ ಮೂಲಕ ಒಂದು ಟ್ಯಾಂಕರ್ನಿಂದ ಇನ್ನೊಂದು ಟ್ಯಾಂಕರ್ಗೆ ಡಂಪ್ ಮಾಡುತ್ತಿದ್ದ ವೇಳೆ ಅಕ್ರಮವಾಗಿ ಸೀಮೆಎಣ್ಣೆ ಸಾಗಿಸುತ್ತಿದ್ದುದು ಬಯಲಾಗಿದೆ.
ಪರವಾನಗಿ ಇಲ್ಲದೆ ಒಂದು ಗಾಡಿಯಿಂದ ಇನ್ನೊಂದು ಗಾಡಿಗೆ ಸೀಮೆಎಣ್ಣೆ ತುಂಬಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಸೀಲ್ದಾರ್ ವೆಂಕನಗೌಡ ಪಾಟೀಲ್, ಶಹರ್ ಠಾಣೆ ಪಿಎಸ್ಐ ಬಾಳನಗೌಡ ಭೇಟಿ ನೀಡಿ ಲಾರಿಗಳನ್ನು ಪರಿಶೀಲಿಸಿದರು. ನಂತರ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಈ ಕುರಿತು ತನಿಖೆ ಮುಂದುವರೆದಿದೆ.