ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶ್ರೀನಿವಾಸ ಕ್ಯಾಂಪ್‌ನಲ್ಲಿ ಕನಕ ಜಯಂತ್ಯುತ್ಸವ

Lingaraj Badiger
Updated On : 22 Nov 2013, 11:41 am

ಸಿಂಧನೂರು: ತಾಲೂಕಿನ ಶ್ರೀನಿವಾಸಕ್ಯಾಂಪ್‌ನಲ್ಲಿ ಕನಕದಾಸ ಯುವಕ ಸಂಘದ ಆಶ್ರಯದಲ್ಲಿ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ತೆರೆದ ವಾಹನದಲ್ಲಿ ಕನಕದಾಸರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮಹಿಳೆಯರು, ಮಕ್ಕಳು ಕಳಸ, ಕನ್ನಡಿ ಹಿಡಿದು ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದಾನಿಗಳು, ಶಿಕ್ಷಕರು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶೇಖರಗೌಡ, ಪರಮೇಶ ಅವರು ಮಾತನಾಡಿದರು.
ಮುಖ್ಯಗುರು ಆಂಜನೇಯ ಬಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಮಹಾದೇವಪ್ಪ. ಎಸ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಸಿದ್ದಪ್ಪ ಸ್ವಾಗತಿಸಿದರು. ದುರ್ಗೇಶ ಹಳಿಯೂರ ನಿರೂಪಿಸಿದರು. ಕನಕದಾಸರ ಭಾವಚಿತ್ರ ಮೆರವಣಿಗೆ ಹುಚ್ಚರಡ್ಡಿ ಬಾಗಲವಾಡ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement