ಅಭಿಮಾನಿ ಪ್ರಕಾಶನ ಪ್ರಶಸ್ತಿ: ಪತ್ರಕರ್ತರಿಂದ ಅರ್ಜಿ ಆಹ್ವಾನ
ರಾಯಚೂರು: ಬೆಂಗಳೂರಿನ ಅಭಿಮಾನಿ ಪ್ರಕಾಶನದ ವತಿಯಿಂದ ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ, ವರದಿ ಬರೆದ ಪತ್ರಕರ್ತರಿಂದ ಪ್ರಶಸ್ತಿಗೆ ಅರ್ಜಿ ಕರೆಯಲಾಗಿದೆ.
ಪ್ರಕಾಶನವು ಪ್ರಶಸ್ತಿಯಲ್ಲಿ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಿದ್ದು, 2012 ಮತ್ತು 2013ನೇ ಸಾಲಿನ ಪ್ರಶಸ್ತಿಗೆ ಸಾಮಾಜಿಕ ಸಮಸ್ಯೆಗಳ ಕುರಿತ ವರದಿಗಳನ್ನು ಪರಿಗಣಿಸಲಾಗುತ್ತದೆ. ವಿವರಗಳನ್ನು ಬಿಳಿಹಾಳೆಯಲ್ಲಿ ಬರೆದು ಅಭಿಮಾನಿ ಪ್ರಶಸ್ತಿ 2012 ಮತ್ತು ಅಭಿಮಾನಿ ಪ್ರಶಸ್ತಿ 2013 ಎಂದು ಪ್ರತ್ಯೇಕವಾಗಿ ಆಯಾ ವರ್ಷಕ್ಕೆ ವಿವರಗಳನ್ನು ಕಳುಹಿಸಬೇಕು.
ಅದೇ ರೀತಿ ಮಾನವೀಯ ಸಮಸ್ಯೆ ಕುರಿತ ಮೈಸೂರು ದಿಗಂತ ಪ್ರಶಸ್ತಿಗೆ ಎರಡೂ ವರ್ಷಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪ್ರಶಸ್ತಿಗಳಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು. ಕನ್ನಡ ದೈನಿಕ, ವಾರಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಬರೆದ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತದೆ. ಲೇಖನ ವರದಿಗಳಿಗೆ ಸಂಪಾದಕರಿಂದ ದೃಢೀಕರಣ ಪತ್ರ ಪಡೆದು ಲಗತ್ತಿಸಬೇಕು.
ಅರ್ಜಿಗಳನ್ನು ನ.25 ರೊಳಗೆ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು ಇಲ್ಲಿಗೆ ಕಳುಹಿಸಲು ಕಾರ್ಯದರ್ಶಿ ಶಂಕ್ರಪ್ಪ ತಿಳಿಸಿದ್ದಾರೆ.