ನಕಲಿ ವೈದ್ಯ ಪೊಲೀಸ್ ವಶಕ್ಕೆ
ರಾಯಚೂರು: ನಗರದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳ ತಂಡವು ಶುಕ್ರವಾರ ನಗರದಲ್ಲಿ ಕಾರ್ಯಾಚರಣೆ ನಡೆಸಿ ನಕಲಿ ವೈದ್ಯನೊಬ್ಬನನ್ನು ಪತ್ತೆ ಹಚ್ಚಿದೆ.
ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಅಮರಗುಂಡಪ್ಪ ಜೀಡಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ನಗರದ ಸಿಟಿ ಟಾಕೀಸ್ ರಸ್ತೆಯಲ್ಲಿ ಯಾವುದೇ ವೈದ್ಯಕೀಯ ವ್ಯಾಸಂಗದ ಪ್ರಮಾಣ ಪತ್ರವಿಲ್ಲದೇ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯ ಡಾ.ಗೌತಮ್ ದೇಬ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ನಗರದ ಇನ್ನಿತರೆಡೆಯೂ ತಂಡವು ತಪಾಸಣೆ ನಡೆಸಿತು. ತಂಡದಲ್ಲಿ ಪಿಎಸ್ಸೈ ದಾದಾವಲಿ, ಡಾ.ಬಸವರಾಜ್ ಮತ್ತಿತರರು ಇದ್ದರು.
--