ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಭಾವೈಕ್ಯತೆಯ ಹಜರತ್ ಕವಡೆಪೀರಾ ಸವಾರಿ

Lingaraj Badiger
Updated On : 23 Nov 2013, 11:05 am

ಮುದಗಲ್: ಮೊಹರಂನ 17ನೇ ದಿನವಾದ ಶುಕ್ರವಾರ ಸಂಜೆ ಹಜರತ್ ಕವಡೆಪೀರಾ ಆಲಂಗಳು ಪರಸ್ಪರ ಅಪ್ಪಿಕೊಳ್ಳುವ ಮೂಲಕ ಮೊಹರಂ ಹಬ್ಬಕ್ಕೆ ವೈಭವವಾಗಿ ತೆರೆ ಬಿದ್ದಿತು. ಹಿಂದೂ- ಮುಸ್ಲಿಮರ ಭಾವೈಕ್ಯತೆಯ ಪ್ರತೀಕವಾದ ಮುದಗಲ್ ಮೊಹರಂ ಹಜರತ್ ಹಸನ- ಹುಸೇನ್ ದಫನ್ ನಡೆದ ನಂತರ 7ನೇ ದಿನ ನಡೆಯುವ ಕವಡೆಪೀರಾ ಸವಾರಿ ವಿಶೇಷವಾಗಿದೆ.
ಖಿಲ್ಲಾದಲ್ಲಿ ನಡೆದ ಕಾಳಗದಲ್ಲಿ ಹಜರತ್ ಹುಸೇನ್‌ನು ಮಡಿದ ನಂತರ ಅವರ ವಂಶಸ್ಥರಾದ ಕವಡೆಪೀರರು ಉಳಿಯುತ್ತಾರೆ. ಇವರ ನಂತರ ನಡೆದ ಚರಿತ್ರೆಯ ಸಂಕೇತವಾಗಿ ಮೊಹರಂ 17ನೇ ದಿನಕ್ಕೆ ಇವರ ಸವಾರಿ ಹಾಗೂ ದಫನ ಕಾರ್ಯಕ್ರಮ ಜರುಗುತ್ತವೆ.
7 ದಿನಗಳ ಕಾಲ ದರಗಾದಲ್ಲಿ ಆಲಂಗಳನ್ನ ಪ್ರತಿಷ್ಠಾಪಿಸಿ ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ. ಆದರೆ ಐತಿಹಾಸಿಕ ಎರಡು ಸುತ್ತಿನ ಕೋಟೆಯ ಮುಂಭಾಗದಲ್ಲಿ ನೂರಾರು ಕವಡೆಪೀರ ಆಲಂಗಳು ಸೇರಿ ಪರಸ್ಪರ ಅಪ್ಪಿಕೊಳ್ಳುವ ನಂತರ ದಫನ ನಡೆಯುತ್ತದೆ. ಈ ಮೂಲಕ ಅಂತಿಮ ಮೊಹರಂಗೆ ವಿದಾಯ ಹೇಳಲಾಗುತ್ತದೆ.
ಭಕ್ತ ಸಮೂಹ ಉತ್ತತ್ತಿ ಹಾರಿಸಿ ಕವಡೆಪೀರಾ, ಜುಮ್ಕೆಪೀರಾ ದೋಸ್ತಾರಹಹೋ ದೀನ್ ಎಂದು ಹೇಳುತ್ತ ಭಕ್ತಿಯಿಂದ ಆಲಂಗಳಿಗೆ ನಮಿಸುತ್ತಾರೆ. ಈ ವೇಳೆ ವಿವಿಧೆಡೆ ತೆರಳಿದ್ದ ಹಿಂದೂ- ಮುಸ್ಲಿಂ ಭಕ್ತರರೆಲ್ಲರೂ ಸಾಕ್ಷಿಯಾದರು. ಮೊಹರಂ ನೋಡಲು  ಸಾವಿರಾರು ಜನರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement