'ಮಹಿಳೆಯರು ಸ್ವಾವಲಂಣಬಿಗಳಾಗಲಿ'
ಸಿಂಧನೂರು: ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು ಪ್ರಾಮಾಣಿಕತನದಿಂದ ಸ್ವ ಸಹಾಯ ಗುಂಪುಗಳನ್ನು ಕಟ್ಟಿ ಸಮಾಜದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಪರಿಣಾಮ ದೇಶದಲ್ಲಿ ಇಂದು ಮಹಿಳೆಯರಿಗಾಗಿ ಮಹಿಳಾ ಬ್ಯಾಂಕ್ ಸ್ಥಾಪನೆಗೊಂಡಿದೆ. ಮಹಿಳೆಯರು ಇನ್ನಷ್ಟು ಜಾಗೃತರಾಗಿ ಆರ್ಥಿಕ ಸ್ವಾವಲಂಬನೆ ಬದುಕು ಹೊಂದಬೇಕು ಎಂದು ಆರ್ಡಿಸಿಸಿ ಬ್ಯಾಂಕ್ ವೃತ್ತ ವ್ಯವಸ್ಥಾಪಕ ಡಿ. ಬಸವರಾಜ ಕರೆ ನೀಡಿದರು.
ಅವರು ಉಮಲೂಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ನಿ., ರಾಯಚೂರು ಅರ್ಡಿಸಿಸಿ, ಬ್ಯಾಂಕ್ ನಿಯಮಿತ ಸಿಂಧನೂರು, ಸಹಕಾರ ಇಲಾಖೆ ಸಿಂಧನೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ನಿ., ಇವರ ಸಂಯುಕ್ತ ಆಶ್ರಯದಲ್ಲಿ ಸಹಕಾರ ಸಪ್ತಾಹ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯ ಅಧಿಕಾರಿ ಸೈಯ್ಯದ್, ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ, ಶೌಚಾಲಯದ ಅವಶ್ಯಕತೆ ಕುರಿತು ಮಾತನಾಡಿದರು. ಅಂಚೆ ಇಲಾಖೆಯ ಮರಿಯಪ್ಪ, ಇಲಾಖೆ ಗ್ರಾಮೀಣ ಪ್ರದೇಶದ ಜನರಿಗೆ ಒದಗಿಸುವ ಸೌಲಭ್ಯಗಳ ಕುರಿತು ಮಾಹಿತಿ ಹೇಳಿದರು. ಅಧ್ಯಕ್ಷ ವಿರುಪನಗೌಡ ಜಾಗೀರ್ದಾರ, ಬಸನಗೌಡ ಪಾಟೀಲ್, ಶಂಕರಗೌಡ ಹನುಮಂತಪ್ಪ ನಾಯಕ, ಮರಿಯಪ್ಪ ಭೋವಿ ಇದ್ದರು.