ಹೆಚ್ಚಿದ ರಸ್ತೆ ಕಳ್ಳರ ಹಾವಳಿ: ಆತಂಕ
ಮುದುಗಲ್: ತಲೇಖಾನ್ ಛತ್ರ ರಸ್ತೆಯ ಮಾರ್ಗದ ದಾದುಡಿ ತಾಂಡಾದ ಹತ್ತಿರ ರಸ್ತೆಗೆ ಅಡ್ಡಲಾಗಿ ವೈಯರ್ ಕಟ್ಟಿ ದರೋಡೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ 11 ಗಂಟೆಗೆ ಸುಮಾರಿಗೆ ಜರುಗಿದೆ.
ರಸ್ತೆಗೆ ತಿರುಗಾಡುವವರಿಗೆ ಹೊಂಚುಹಾಕಿದ ಕಳ್ಳರು ರಸ್ತೆಗೆ ಅಡ್ಡಲಾಗಿ ತಂತಿ ಕಟ್ಟಿ ರಸ್ತೆಗೆ ಬರುವವರಿಂದ ಹಣ ದೋಚಲು ಸಂಚು ರೂಪಿಸಿದ್ದಾರೆ. ರಾತ್ರಿ ವೇಳೆಗೆ ದ್ವಿಚಕ್ರ ಸವಾರನೊಬ್ಬ ದಾದುಡಿ ತಾಂಡಾಕ್ಕೆ ಬರುವಾಗ ದರೋಡೆಕೋರರ ಸಂಚು ತಿಳಿದು, ತಪ್ಪಿಸಿಕೊಳ್ಳಲು ಮುಂದಾಗಿದ್ದನು. ಬೈಕ್ ಸವಾರ ತಪ್ಪಿಸಿಕೊಳ್ಳುವುದನ್ನು ಗಮನಿಸಿದ ಕಳ್ಳರು ಆತನ ಮೇಲೆ ಎರಗಿ ಥಳಿಸಿದ್ದಾರೆಂದು ದ್ವಿಚಕ್ರ ಸವಾರ ಛತ್ರಪ್ಪ ನಾಯ್ಕ ಪತ್ರಿಕೆಗೆ ತಿಳಿಸಿದ್ದಾರೆ. ಈ ಕುರಿತು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವುದಾಗಿ ಪೊಲೀಸ್ ಉಪವಿಭಾಗಾಧಿಕಾರಿ ಅನಿತಾ ಹದ್ದಣ್ಣನವರ್ ತಿಳಿಸಿದರು.