ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ರಮ ಮದ್ಯ ಮಾರಾಟ; ಮಹಿಳೆಯರ ಪ್ರತಿಭಟನೆ

Mainashree
Updated On : 26 Nov 2013, 11:36 am

ಸಿಂಧನೂರು: ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಅಕ್ರಮವಾಗಿ ಐದಾರು ಅಂಗಡಿಗಳಲ್ಲಿ ಮದ್ಯ ಮಾರಾಟ ವಿರೋಧಿಸಿ ಗ್ರಾಮದ ಮಹಿಳೆಯರು ತಾಪಂ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಒಂದೇ ಗ್ರಾಮದಲ್ಲಿ ಐದಾರು ಮದ್ಯದಂಗಡಿಗಳು ತಲೆ ಎತ್ತಿವೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಇದರಿಂದಾಗಿ ತಮ್ಮ ಗಂಡಂದಿರು ದುಡಿದ ಹಣವನ್ನೆಲ್ಲಾ ಮದ್ಯದಂಗಡಿಗಳಿಗೆ ಇಟ್ಟು ಬರಿಗೈಲಿ ಬರುತ್ತಾರೆ. ಇದರಿಂದ ಸಂಸಾರ ನಡೆಸುವುದು ದುಸ್ತರವಾಗಿದೆ. ಕೂಡಲೇ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಮನವಿಯನ್ನು ಸಲ್ಲಿಸಿದರು.
ಕೂಡಲೇ ಸ್ಥಳಕ್ಕೆ ಅಬಕಾರಿ ನಿರೀಕ್ಷಕರಾದ ಹೊನ್ನಪ್ಪ ಮತ್ತು ಬಸವರಾಜ ಅವರನ್ನು ಶಾಸಕರು ಸ್ಥಳಕ್ಕೆ ಕರೆಯಿಸಿ ಅಕ್ರಮ ಮದ್ಯದಂಗಡಿಗಳನ್ನು ಬಂದ್ ಮಾಡಿಸುವಂತೆ ಸೂಚಿಸಿದರು. ಇದಕ್ಕೆ ಅಬಕಾರಿ ನಿರೀಕ್ಷಕರು ಒಪ್ಪಿಕೊಂಡರು. ಇದರಿಂದ ಸಂತಸಗೊಂಡ ಮಹಿಳೆಯರು ಶಾಸಕ ಬಾದರ್ಲಿಯವರಿಗೆ ಹೂಮಾಲೆ ಹಾಕಿ ವಾರದೊಳಗೆ ಬಂದ್ ಮಾಡಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement