ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೃಷಿ ಡಿಡಿ... ಎಸ್ಸಾರ್...ಡಿಎಚ್‌ಒ... ಪ್ರೆಸೆಂಟ್ಸಾರ್..ಜೆಸ್ಕಾಂ... ಬಂದಿಲ್ಲಾ ಸಾರ್! ಇಲಾಖಾವಾರು ಹಾಜರಿ ಪರಿಶೀಲನೆ ಪರಿಯಿದು

Mainashree
Updated On : 26 Nov 2013, 11:38 am

ರಾಯಚೂರು: ಕೃಷಿ ಡಿಡಿ ಎಸ್ ಸಾರ್.., ಹೆಲ್ತ್ ಡಿಎಚ್‌ಒ ಪ್ರೆಸೆಂಟ್ ಸಾರ್.., ಜೆಸ್ಕಾಂ ಬಂದಿಲ್ಲ ಸರ್...
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಪಂ ಸಭೆಯಲ್ಲಿ ಕಂಡುಬಂದ ದೃಶ್ಯವಿದು. ಅಕ್ಷರಶಃ ಜಿಪಂ ಸಭಾಂಗಣ ಪ್ರಾಥಮಿಕ ಶಾಲೆಯಂತಾಗಿತ್ತು. ಇದಕ್ಕೆ ಕಾರಣ ಜಿಪಂ ಸಭೆಗೆ ಪದೆಪದೇ ಗೈರು ಹಾಜರಾಗುತ್ತಿರುವ ಅಧಿಕಾರಿಗಳು.
10 ಜಿಪಂ ಸಾಮಾನ್ಯ ಸಭೆ ಸೇರಿದಂತೆ ಸ್ಥಾಯಿ ಸಮಿತಿ ಸಭೆ ಮತ್ತಿತರೆ ಎಲ್ಲ ಸಭೆಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗುತ್ತಿರುವ ಬಗ್ಗೆ ಜಿಪಂ ಸದಸ್ಯರಾದ ಜಾಫರ್ ಅಲಿ ಪಟೇಲ್,ಅಸ್ಲಂಪಾಷಾ ಮತ್ತಿತರರು ಆಕ್ಷೇಪಿಸಿ ಕ್ರಮಕ್ಕೆ ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ಜಿಪಂ ಸಿಇಒ ಡಾ.ಮುದ್ದುಮೋಹನ್ ಅವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಆದರೆ ಮತ್ತೊಂದೆಡೆ ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಅವರು, ಅಧಿಕಾರಿಗಳ ಹಾಜರಾತಿ ಪರೀಕ್ಷೆಗೆ ಮುಂದಾಗಿ ಇಲಾಖಾವಾರು ಹಾಜರಿ ತೆಗೆದುಕೊಂಡರು. ಅಧಿಕಾರಿಗಳು ತಮ್ಮ ಇಲಾಖೆಯ ಹೆಸರು ಕೂಗಿದಾಗಲೆಲ್ಲ ಎಸ್ ಸರ್, ಪ್ರೆಸೆಂಟ್ ಸರ್ ಎಂದು ಶಾಲಾ ಮಕ್ಕಳಂತೆ ಕೈ ಎತ್ತಿ ಹೇಳುತ್ತಿದ್ದದ್ದು ಸಭಿಕರರಲ್ಲಿ ನಗೆ ತರಿಸದಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement