ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೇಗಳಪೇಟೆ ಹಾಲುಮತ ಸಮಾಜದಿಂದ ಕನಕ ಜಯಂತಿ

Mainashree
Updated On : 26 Nov 2013, 11:36 am

ಮುದಗಲ್: ಪಟ್ಟಣದ ಮೇಗಳಪೇಟೆ ಹಾಲುಮತ ಸಮಾಜದಿಂದ ಕನಕದಾಸರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಕನಕ ದಾಸರ ಭಾವಚಿತ್ರ ಮೆರವಣಿಗೆಯನ್ನು ಸ್ಥಳೀಯ ನೀಲಕಂಠೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಟ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಸಂಜೀವಪ್ಪಯ್ಯ ಪೂಜೆ ಸಲ್ಲಿಸಿ ಹೂಮಾಲೆ ಹಾಕಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಜ್ಜಬಲಿ ಟಿಂಗ್ರಿ, ಸದಸ್ಯರಾದ ವೀರೇಶ ವಡ್ಡರ, ಮಹ್ಮದ ಸಾದಿಕ ಅಲಿ, ಮಾಸೂಮ ಷರೀಫ್, ರಾಮಣ್ಣ, ಪಟ್ಟಣ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹಿರೇಮನಿ, ಪ.ಪಂ. ಸದಸ್ಯ ಅಬ್ದುಲ್ ರಫ್, ವೀರಭದ್ರಪ್ಪ ಕೊಳ್ಳಿ, ಬಂದೇನವಾಜ, ಖಾಜಾಪಾಷಾ ಗಾಡಿವಾನ, ಮುಖಂಡರಾದ ಶಿವಶಂಕರಗೌಡ ಉಪ್ಪಾರನಂದಿಹಾಳ, ಮಹಾಂತೇಶ ಪಾಟೀಲ್, ನಾಗರಾಜ ದಫೇದಾರ, ರಾಯಪ್ಪ ಹೊಳ್ಯಾಚಿ, ಬಸವರಾಜ ಜಲ್ಲಿ, ನಂದಪ್ಪ ಕತ್ತಿ, ಹನುಮಂತಪ್ಪ ಮಾಜಿ, ದುರಗಪ್ಪ, ಹನುಮಂತ ಕೊಳಿತತ್ತಿ, ಸಂಜಿವಪ್ಪ, ನಾಗನಗೌಡ ಅಕ್ಕಿ, ಡಾ.ಬಸವರಾಜ ಹೊರಪೇಟೆ, ಮಂಜುನಾಥ ಬನಿಗೋಳಕರ್ ಸೇರಿದಂತೆ ನೂರಾರು ಹಾಲುಮತ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಡೊಳ್ಳು ಕುಣಿತ, ಬೆಂಜೋವಾದನ್ ಸಾರ್ವಜನಿಕರನ್ನು ರಂಜಿಸಿತು. ಮಹಿಳೆಯರು ಕಳಸ ಕನ್ನಡಿಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement