ಜೂಜು: ಒಬ್ಬ ಸೆರೆ
ರಾಯಚೂರು: ಸಿಂಧನೂರು ತಾಲೂಕಿನ ಬಳಗಾನೂರು ಬಳಿ ಪೊಲೀಸರು ಮಟಕಾ ಜೂಜಿನಲ್ಲಿ ತೊಡಗಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಅಮರೇಶ್ ಎಂದು ಗುರುತಿಸಲಾಗಿದೆ. ಈತ ತಿಪ್ಪನಹಟ್ಟಿ ಮತ್ತು ಪಗಡದಿನ್ನಿ ರಸ್ತೆಯಲ್ಲಿ ಮಟಕಾ ಜೂಜಿನಲ್ಲಿ ತೊಡಗಿದ್ದಾಗ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಅವನಿಂದ 785 ಜಪ್ತಿ ಮಾಡಿದ್ದಾರೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಟೋ ಪಲ್ಟಿ: ಮಹಿಳೆ ಸಾವು
ರಾಯಚೂರು: ತಾಲೂಕಿನ ಸುಲ್ತಾನಪುರ ಗ್ರಾಮದ ಬಳಿ ಟಾಟಾ ಏಸ್ ಪಲ್ಟಿಯಾಗಿ ಗಂಗಮ್ಮ (40) ಎಂಬವರು ಮೃತಪಟ್ಟಿದ್ದಾರೆ. ಅಪಘಾತ ವೇಳೆ ತೀವ್ರ ಗಾಯಗೊಂಡು ಗಂಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೂವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.