'ಆತ್ಮರಕ್ಷಣೆಗೆ ಕರಾಟೆ ಕಲಿಯಿರಿ'
ಸಿಂಧನೂರು: ಜಗತ್ಪ್ರಸಿದ್ಧ ಕರಾಟೆ ಪಟು ಬ್ರುಸ್ಲೀ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ಸುಪರ್ ಬಡೋಕಾನ್ ಕರಾಟೆ ಕ್ಲಬ್ ಏರ್ಪಡಿಸಿದ್ದ ಸಮಾರಂಭದಲ್ಲಿ ಕರಾಟೆ ವಿದ್ಯಾರ್ಥಿನಿ ಕಲ್ಪನಾ ಕರಾಟೆ ಕುರಿತು ಮಾತನಾಡಿದರು.
ಕರಾಟೆ ಕಲಿಯುವುದರಿಂದ ಆತ್ಮರಕ್ಷಣೆಯ ಜೊತೆಗೆ ಶಾರೀರಿಕ ಸದೃಢತೆ ಮತ್ತು ರೋಗಮುಕ್ತರಾಗಿ ಬದುಕಬಹುದು ಎಂದು ಆಕೆ ತಿಳಿಸಿದಳು.
ಕರಾಟೆ ಅವಶ್ಯಕ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಗಮನಿಸಿದರೆ ಮಹಿಳೆಯರಿಗೆ ಕರಾಟೆ ಅತ್ಯವಶ್ಯವಾಗಿದೆ. ಪುರುಷರು ಸಹ ಆಪತ್ಕಾಲದಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಕರಾಟೆ ಕಲಿಯಬೇಕು ಎಂದು ಕಲ್ಪನಾ ಸಲಹೆ ನೀಡಿದಳು.
ಕರಾಟೆ ಕ್ಲಬ್ ಅಧ್ಯಕ್ಷ ಕೆ.ಕಲ್ಯಾಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ಕರಾಟೆ ಇತಿಹಾಸ ಕುರಿತು ವಿವರಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷ ಡಿ.ಎಚ್. ಕಂಬಳಿ ಕಾರ್ಯಕ್ರಮ ಉದ್ಘಾಟಿಸಿದರು. ಸುಕಾಲಪೇಟೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವೀರನಗೌಡ ಪಾಟೀಲ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅನಂತರಾವ್, ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಶಶಿಕುಮಾರ ದಾನಿ, ಕರಾಟೆ ತರಬೇತುದಾರ ಎಚ್.ವೈ. ಸೂಲಂಗಿ, ಸಿ.ಆರ್.ಸಿ. ವೀರೇಶ ಗೋನವಾರ, ಶಿಕ್ಷಕರಾದ ಗಂಗಾಧರ, ದೀಪಂಕರ್, ಯಮನಪ್ಪ ನಾಗಲಾಪೂರ, ಕರಾಟೆ ಶಿಕ್ಷಕರಾದ ಶೇಖರ್ ರಾಠೋಡ್, ಯೂನೂಸ್, ಹಸೇನಪ್ಪ ಸೂಲಂಗಿ ಭಾಗವಹಿಸಿದ್ದರು.
ಕರಾಟೆ ಶಿಕ್ಷಕ ಕೆ.ಕಲ್ಯಾಣಕುಮಾರ್ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಅಂಗಡಿ ನಿರೂಪಿಸಿದರು.