ಶೀಘ್ರವೇ 3 ವಿದ್ಯುತ್ ಫೀಡರ್ ಅಳವಡಿಕೆ: ದೇಸಾಯಿ ಭರವಸೆ
ಸಿಂಧನೂರು: ಗ್ರಾಮದಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸಲು ವಿದ್ಯುತ್ ಕೇಂದ್ರದ ಘಟಕದಲ್ಲಿ ಶೀಘ್ರವೇ ಇನ್ನೂ ಮೂರು ವಿದ್ಯುತ್ ಫೀಡರ್‌ಗಳನ್ನು ಅಳವಡಿಸಲಾಗುವುದು ಎಂದು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ ದೇಸಾಯಿ ಭರವಸೆ ನೀಡಿದರು.
ತಾಲೂಕಿನ ಬಳಗಾನೂರು ಜೆಸ್ಕಾಂ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಗ್ರಾಮದ ಕೇಂದ್ರದಲ್ಲಿ ಪ್ರತ್ಯೇಕವಾಗಿ ಮೂರು ಫೀಡರ್ ಅಳವಡಿಕೆಗೆ ಸ್ಥಳದ ಅಭಾವದಿಂದ ಕಾಮಗಾರಿ ವಿಳಂಬವಾಗಿತ್ತು. ಪಿಎಸ್‌ಐ ಮಹಾಂತೇಶ ಸಜ್ಜನ್, ಗ್ರಾಮದ ಮುಖಂಡರೊಂದಿಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಸ್ಥಳಕ್ಕೆ ಭೇಟಿ ನೀಡಿ ಭೂದಾನಿಗಳಾದ ಸಿದ್ದಪ್ಪ ಚಳ್ಳೂರ ಮತ್ತು ಅವರ ಸಂಬಂಧಿಗಳ ಮನವೊಲಿಸಿ ಫೀಡರ್ ಅಳವಡಿಕೆಗೆ ಸ್ಥಳ ಪಡೆಯಲಾಗಿದೆ.
ಶೀಘ್ರವೇ ವಿದ್ಯುತ್ ಕೊರತೆ ನೀಗಿಸಲು ಪ್ರಯತ್ನಿಸಲಾಗುವುದು. ಭೂದಾನಿಗಳ ಆಸ್ತಿಗೆ ಯಾವುದೇ ಧಕ್ಕೆಯಾಗದಂತೆ ಫೀಡರ್ ಅಳವಡಿಸಲಾಗುತ್ತದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಎಚ್.ಮಹಾಬಳೇಶ, ಮುಖಂಡರಾದ ವಿರುಪಣ್ಣ ಗುತ್ತೇದಾರ, ಗೋವಿಂದ ರೆಡ್ಡಿಗೌಡ, ಬಸನಗೌಡ ಮುದೇಗೌಡರ, ನಾಗೇಶ ಬೆಳ್ಳಿಗನೂರು, ಬಿ.ತಿಕ್ಕಯ್ಯ, ನಾಗಬುಸ್ಸಪ್ಪ, ವಿಶ್ವನಾಥಗೌಡ ಹಳ್ಳಿ, ಮೈಬೂಪಾಷ ಅತ್ತಾರ, ಇಸ್ಮಾಯಿಲ್ ಚೌದರಿ, ಗ್ರಾಪಂ ಸದಸ್ಯರಾದ ಎಸ್.ಮೌನೆಶಗೌಡ, ಗಣೆಶ್, ಕೆ.ನಾಗರಾಜ ಮತ್ತಿತರರು ಇದ್ದರು.